Job Description: * ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಜುಲೈ. 11 ರಂದು ದೇಶದ ಮೊದಲ ಖಾಸಗಿ ದ್ರವೀಕೃತ ನೈಸರ್ಗಿಕ ಅನಿಲ -ಎಲ್ಎನ್ ಜಿ ಘಟಕವನ್ನು ಮಹಾರಾಷ್ಟ್ರದ ನಾಗ್ಪುರದಲ್ಲಿ ಉದ್ಘಾಟಣೆ ಮಾಡಿದರು. * ಈ ದ್ರವೀಕೃತ ನೈಸರ್ಗಿಕ ಅನಿಲ -ಎಲ್ಎನ್ ಜಿ ಘಟಕವು ಸಾಗಣೆ ವೆಚ್ಚವನ್ನು ಕಡಿಮೆಗೊಳಿಸಲು ಶುದ್ಧ ಹಾಗೂ ವೆಚ್ಚಪರಿಣಾಮಕಾರಿ ಇಂಧನ ಘಟಕ ಇದಾಗಲಿದೆ ಎಂದಿದ್ದಾರೆ, ಹಾಗೂ ಇನ್ನು ಮುಂದೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯ ಕೂಡ ಈ ಘಟಕವು ಹೊಂದಿದೆ ಜೊತೆಗೆ ಮುಂದಿನ ದಿನಗಳಲ್ಲಿ ಸಾರಿಗೆ ವಲಯದಲ್ಲಿ ಕ್ರಾಂತಿ ತರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಈ ದ್ರವೀಕೃತ ನೈಸರ್ಗಿಕ ಅನಿಲ -ಎಲ್ಎನ್ ಜಿ'ಯನ್ನು ಎಥನಾಲ್, ವಿದ್ಯುತ್, ಸಂಕುಚಿತ ನೈಸರ್ಗಿಕ ಅನಿಲ, ದ್ರವೀಕೃತ ನೈಸರ್ಗಿಕ ಅನಿಲ ಇಂಧನಗಳಿಗೆ ಪರ್ಯಾಯವಾಗಿ ಬಳಸಬಹುದಾಗಿದೆ ಎಂದು ತಿಳಿಸಿದ್ದಾರೆ.