Job Description: * ವಿಂಬಲ್ಡನ್ ಬಾಲಕರ ವಿಭಾಗದ ಸಿಂಗಲ್ಸ್ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯನ್ನು ಅಮೆರಿಕದ ಟೆನಿಸ್ ಆಟಗಾರ ಸಮೀರ್ ಬ್ಯಾನರ್ಜಿ ಅವರು ಪಡೆದುಕೊಂಡಿದ್ದಾರೆ, ಹಾಗೂ ಇವರು ಭಾರತೀಯ ಮೂಲದ ಅಮೆರಿಕದ ಟೆನಿಸ್ ಆಟಗಾರರಾಗಿದ್ದಾರೆ. * ಪ್ರಸ್ತುತ ಜೂನಿಯರ್ ವಿಭಾಗದ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ವಿಕ್ಟರ್ ಲಿಲೊವ್ ವಿರುದ್ಧ ಸಮೀರ್ ಬ್ಯಾನರ್ಜಿ ಜಯ ಸಾಧಿಸಿದರು. * ಈ ಹಿಂದೆ ಸಮೀರ್ ಬ್ಯಾನರ್ಜಿ ಅವರು ಫ್ರೆಂಚ್ ಓಪನ್'ನ ಮೊದಲ ಸುತ್ತಿನಲ್ಲೇ ಸೋಲ ಅನುಭವಿಸಿದ್ದರು. * 1954 ರಲ್ಲಿ ರಾಮನಾಥನ್ ಕೃಷ್ಣನ್ ಅವರು ಬಾಲಕರ ವಿಭಾಗದಲ್ಲಿ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಇವರಾಗಿದ್ದಾರೆ, ಮತ್ತೇ 1970 ರಲ್ಲಿ ರಾಮನಾಥನ್ ಅವರ ಮಗನಾದ ರಮೇಶ್ ಕೃಷ್ಣನ್ ಅವರು ವಿಂಬಲ್ಡನ್ ಜೂ. ಹಾಗೂ ಫ್ರೆಂಚ್ ಓಪನ್ ಜೂ. ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.