Job Description: * ಪ್ರಸ್ತುತ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಇದೀಗ ಬೇರೆ ಬೇರೆ ದೇಶಗಳಿಗೆ ಉತ್ಪನ್ನಗಳನ್ನು ಕಳುಹಿಸಿಸಲು ಸಿದ್ಧವಾಗುತ್ತಿದೆ, ಈ ಕಾರಣದಿಂದಾಗಿ ಅಮೆರಿಕ, ಕತಾರ್, ಶ್ರೀಲಂಕಾ, ಜಪಾನ್, ಇಟಲಿ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸಿಂಗಾಪುರ, ಬ್ರೆಜಿಲ್ ಒಳಗೊಂಡು ಒಟ್ಟಾರೆ 40 ರಾಷ್ಟ್ರಗಳಲ್ಲಿ ಟ್ರೇಡ್ಮಾರ್ಕ್ ನೋಂದಣಿ ಮಾಡಿಕೊಳ್ಳಲು ಸಿದ್ಧತೆಗಳನ್ನೂ ನಡೆಸುತ್ತಿದ್ದೆ. * ಈ ಹಿಂದೆ ಜೂನ್. 28 ರಂದು ಭೂತಾನ್, ಯುಎಇ ಮತ್ತು ಮೆಕ್ಸಿಕೋ ರಾಷ್ಟ್ರಗಳಲ್ಲಿ ಹೆಸರನ್ನು ನೋಂದಾಯಿಸಿದೆ ಎಂದು MSME ಸಚಿವಾಲಯ ಮಾಹಿತಿಯನ್ನು ನೀಡಿದೆ, ಇದಲ್ಲದೇ ಜರ್ಮನಿ, ಯು.ಕೆ., ಆಸ್ಟ್ರೇಲಿಯಾ, ರಷ್ಯಾ, ಚೀನ ಮತ್ತು ಐರೋಪ್ಯ ಒಕ್ಕೂಟಗಳಲ್ಲಿ 'ಖಾದಿ' ಎಂಬ ಹೆಸರು ನೋಂದಣಿ ಆಗಿದೆ ಎಂದು ಸಚಿವಾಲಯ ತಿಳಿಸಿದೆ. * ಈ ನೋಂದಣಿಯಲ್ಲಿ ಖಾದಿ ಫ್ಯಾಬ್ರಿಕ್ಸ್, ಖಾದಿ ರೆಡಿಮೇಡ್ ಹಾಗೂ ಗ್ರಾಮೀಣ ಕೈಗಾರಿಕೆಗಳ ಉತ್ಪನ್ನ ಸಾಬೂನು, ಸುಗಂಧ ಸೂಸುವ ಕಡ್ಡಿಗಳು ಹೀಗೆ ಹಲವು ಉತ್ಪನ್ನಗಳನ್ನು ನೋಂದಣಿ ಮಾಡಲಾಗಿದೆ ಎಂದು ಸಚಿವಾಲಯವು ಮಾಹಿತಿ ನೀಡಿದೆ.