Job Description: * ಪ್ರಸ್ತುತ ಆಕ್ಸ್ಫ್ಯಾಮ್ ಸಂಸ್ಥೆಯ ವರದಿಯ ಪ್ರಕಾರ ಜಗತ್ತಿನಾದ್ಯಂತ ಪ್ರತಿ ನಿಮಿಷಕ್ಕೆ 11 ಜನ ಹಸಿವಿನಿಂದ ಸಾವನ್ನಪ್ತಿದ್ದಾರೆ ಎಂದು ತಿಳಿಸಿದೆ. * ಆಕ್ಸ್ಫ್ಯಾಮ್ ಸಂಸ್ಥೆಯು "ದ್ವಿಗುಣಗೊಳ್ಳುವ ಹಸಿವಿನ ವೈರಸ್" ಎಂಬ ಶೀರ್ಷಿಕೆ ಅಡಿಯಲ್ಲಿ ವರದಿಯನ್ನು ಪ್ರಕಟಿಸಿದೆ. * ಪ್ರಸ್ತುತ ಕೋವಿಡ್-19ನ ಸೋಂಕಿನಿಂದ ಪ್ರತಿ ನಿಮಿಷಕ್ಕೆ 7ಜನ ಮೃತಪಟ್ಟರೆ, ಹಸಿವಿನಿಂದ ಪ್ರತಿ ನಿಮಿಷಕ್ಕೆ 11 ಜನ ಮೃತರಾಗುತ್ತಿದ್ದಾರೆ ಎಂದು ವರದಿಯನ್ನು ಪ್ರಕಟಿಸಿದೆ. * ಆಕ್ಸ್ಫ್ಯಾಮ್ ಅಮೆರಿಕ ಅಧ್ಯಕ್ಷ ಮತ್ತು ಸಿಇಒ ಅಬ್ಬಿ ಮ್ಯಾಕ್ಸ್ಮ್ಯಾನ್ ನೀಡಿರುವ ಮಾಹಿತಿಯ ಪ್ರಕಾರ, ಪ್ರಸ್ತುತ ಕೋವಿಡ್-19 ನಿಂದ ಆರ್ಥಿಕ ಸಂಕಷ್ಟ ಎದುರಾಗಿದೆ, ಇದರಿಂದಾಗಿ ಆಹಾರ ಪದಾರ್ಥಗಳ ಬೆಲೆಯು ಶೇಕಡ 40 ರಷ್ಟು ಅಧಿಕವಾಗಿವೆ, ಇದುವೇ ಜನರು ಹಸಿವಿನಿಂದ ಬಳಲು ಪ್ರಮುಖ ಕಾರಣವಾಗಿದೆ ಎಂದಿದ್ದಾರೆ. * ಪ್ರಸ್ತುತ ಹಸಿವಿನಿಂದ ಬಳಲುತ್ತಿರುವ ದೇಶಗಳು: ಅಫ್ಗಾನಿಸ್ತಾನ, ಇಥಿಯೊಪಿಯಾ, ದಕ್ಷಿಣ ಸುಡಾನ್, ಸಿರಿಯಾ, ಯೆಮೆನ್ನಲ್ಲಿ ಹಸಿವಿನ ಜನ ಸಂಖ್ಯೆ ಹೆಚ್ಚಿದೆ.