Job Description: * ಪ್ರಸ್ತುತ ದಿ ಲ್ಯಾನ್ಸೆಟ್ ಪ್ಲ್ಯಾನೆಟರಿ ಹೆಲ್ತ್ ಜರ್ನಲ್ ಅಧ್ಯಯನ ನಡೆಸಿ ಪ್ರಕಟಿಸಿರುವ ವರದಿಯ ಪ್ರಕಾರ ಪ್ರತಿ ವರ್ಷ ಭಾರತದಲ್ಲಿನ ಹವಾಮಾನ ಬದಲಾವಣೆಯಿಂದಾಗಿ ಸುಮಾರು 7.4 ಲಕ್ಷ ಸಾವುಗಳಾಗುತ್ತಿವೆ, ಇದಕ್ಕೆ ಗರಿಷ್ಟ ಅಥವಾ ಕನಿಷ್ಠ ಉಷ್ಣಾಂಶ ಕಾರಣವಾಗಿದೆ ಎಂದಿದ್ದಾರೆ. * ಈ ಅಧ್ಯಯನವನ್ನು ಆಸ್ಟ್ರೇಲಿಯಾದ ಮೋನಶ್ ವಿಶ್ವ ವಿದ್ಯಾನಿಲಯದ ಸಂಶೋಧಕರ ನೇತೃತ್ವದಲ್ಲಿ ಅಂತರಾಷ್ಟ್ರೀಯ ತಜ್ಞರ ತಂಡವು ನಡೆಸಿದೆ, ವಾರ್ಷಿಕ 50 ಲಕ್ಷ ಅಧಿಕ ಸಾವುಗಳು ಹವಾಮಾನದಿಂದಾಗಿವೆ ಎಂದು ತಿಳಿಸಿದ್ದಾರೆ. * 2000 ರಿಂದ 2019 ಅವಧಿಯಲ್ಲಿ ಹವಾಮಾನ ಬದಲಾವಣೆಯಿಂದ ಈ ಎಲ್ಲ ಸಾವುಗಳು ಸಂಭವಿಸಿವೆ ಎಂದು ಜುಲೈ. 7 ರಂದು ದಿ ಲ್ಯಾನ್ಸೆಟ್ ಪ್ಲ್ಯಾನೆಟರಿ ಹೆಲ್ತ್ ಜರ್ನಲ್ ಅಧ್ಯಯನದ ವರದಿ ಪ್ರಕಟಿಸಿದೆ. * ಭಾರತದಲ್ಲಿ ಪ್ರತಿ ವರ್ಷ ಅತಿಯಾದ ಕಡಿಮೆ ಉಷ್ಣಾಂಶದಿಂದ 6,55,400 ಸಾವುಗಳು ಮತ್ತು ಅಧಿಕ ಉಷ್ಣಾಂಶದಿಂದ 83,700 ಸಾವುಗಳು ಸಂಭವಿಸಿರುವ ಸಾಧ್ಯತೆಗಳಿವೆ ಎಂದಿದ್ದಾರೆ. * ಶೇ 9.43 ಸಾವುಗಳು ಜಾಗತಿಕ ಹವಾಮಾನ ಕಾರಣದಿಂದ ಸಂಭವಿಸಿವೆ ಎಂಬ ವರದಿಯನ್ನು ಪ್ರಕಟಿಸಿದೆ.