Job Description: * ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(TCS) ಭಾರತದಲ್ಲಿ ನಂ.1 ಸಾಫ್ಟ್ ವೇರ್ ರಫ್ತು ಸಂಸ್ಥೆ ಹಾಗೂ ವಿಶ್ವದ ನಂ.1 ಸಾಫ್ಟ್ ವೇರ್ ಸಂಸ್ಥೆಯಾಗಿದೆ, ಮತ್ತು ಇದು ಟಾಟಾ ಗ್ರೂಪ್ ಸಮೂಹದ ಸಂಸ್ಥೆ ಮತ್ತು ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿದ ಐಟಿ ಸಂಸ್ಥೆಯಾಗಿದೆ. * TCS ಮೊದಲ ಬಾರಿ 100 ಬಿಲಿಯನ್ ಮಾರುಕಟ್ಟೆ ಮೌಲ್ಯ ಹೊಂದಿ 2019 ರ ಏಪ್ರಿಲ್'ನಲ್ಲಿ ಐಟಿ ಸಂಸ್ಥೆಗಳ ಪಟ್ಟಿಗೆ ಸೇರಿಕೊಂಡಿದೆ. * ಪ್ರಸ್ತುತ TCS'ನಲ್ಲಿ ಒಟ್ಟು 509,058 ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ, ಹಾಗೂ ಇದೇ ಸಂಸ್ಥೆಯಲ್ಲಿ ಶೇ 36.2%ರಷ್ಟು ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು HR ಮಿಲಿಂದ್ ಲಕ್ಕಡ್ ಅವರು ತಿಳಿಸಿದ್ದಾರೆ. * ಈ ಹಿಂದಿನ ತ್ರೈಮಾಸಿಕದಲ್ಲಿ 45,111 ಕೋಟಿ ರೂ. ಆದಾಯನ್ನು ಗಳಸಿದೆ, ಇದೇ ಸಂಧರ್ಭದಲ್ಲಿ 8.1 ಬಿಲಿಯನ್ ಡಾಲರ್ ಒಪ್ಪಂದಗಳನ್ನೂ ಮಾಡಿಕೊಂಡಿದೆ.