Job Description: * ಪ್ರಸ್ತುತ ಶ್ಯಾಮ್ ಶ್ರೀನಿವಾಸನ್ ಅವರನ್ನು ಫೆಡರಲ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO)ಆಗಿ 3 ವರ್ಷಗಳ ಅವಧಿಗೆ ಮತ್ತೆ CEO ಆಗಿ ನೇಮಕ ಮಾಡಿದ್ದಾರೆ. * ಪ್ರಸ್ತುತ ಶ್ಯಾಮ್ ಶ್ರೀನಿವಾಸನ್ ಅವರ ಅಧಿಕಾರ ಅವಧಿಯು ಇದೇ 2021 ರ ಸೆಪ್ಟೆಂಬರ್ 23 ರಿಂದ 2024 ರ ಸೆಪ್ಟೆಂಬರ್ 22 ರವರೆಗೆ ಇರಲಿದೆ ಎಂದಿದ್ದಾರೆ. * ಶ್ಯಾಮ್ ಶ್ರೀನಿವಾಸನ್ ಅವರ ಮರು ನೇಮಕಕ್ಕೆ 2021 ರ ಜುಲೈ. 09 ರಂದು RBI ಅನುಮೋದನೆ ನೀಡಿದೆ. * ಫೆಡರಲ್ ಬ್ಯಾಂಕ್ ಲಿಮಿಟೆಡ್ ಇದು ಖಾಸಗಿ ವಲಯದ ಪ್ರಮುಖ ಭಾರತೀಯ ವಾಣಿಜ್ಯ ಬ್ಯಾಂಕ್ ಆಗಿದೆ, ಹಾಗೂ ಇದು ಪ್ರಧಾನ ಕಚೇರಿಯನ್ನು ಕೊಚ್ಚಿಯ ಅಲುವಾದಲ್ಲಿ ಹೊಂದಿದೆ, ಹಾಗೂ ಬೇರೆ ಬೇರೆ ರಾಜ್ಯಗಳಲ್ಲಿ ಒಟ್ಟಾರೆ 1,200 ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ.