Job Description: * ದೈತ್ಯ ಪಾಂಡಾದ ಸ್ಥಿತಿಯನ್ನು 'ದುರ್ಬಲ'ಕ್ಕೆ ನವೀಕರಿಸಲಾಗಿದೆ ಎಂದು ಚೀನಾ ಸಂರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ, ಹಾಗೂ ಇದೀಗ 1,800 ದೈತ್ಯ ಪಾಂಡಾಗಳು ಕಾಡಿನಲ್ಲಿ ವಾಸಿಸುತ್ತಿವೆ ಎಂದಿದ್ದಾರೆ. * ಇತ್ತೀಚಿಗೆ ಚೀನಾದಲ್ಲಿ ದೈತ್ಯ ಪಾಂಡಾ ಹಾಗೂ ಸೈಬೀರಿಯನ್ ಹುಲಿಗಳು, ಏಷ್ಯನ್ ಆನೆಗಳು ಮತ್ತು ಇತರ ಜಾತಿಗಳ ಸಂಖ್ಯೆಯೂ ಕ್ರಮೇಣ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ. * ಈ ಮೊದಲು ಜೈಂಟ್ ಪಾಂಡಾವನ್ನು 5 ವರ್ಷಗಳ ಕಾಲ 'ದುರ್ಬಲ' ಎಂದು ಪರಿಗಣಿಸಲಾಗಿತ್ತು, 2016 ರಲ್ಲಿ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ದೈತ್ಯ ಪಾಂಡಾಗಳನ್ನು ಅಳಿವಿನಂಚಿನಲ್ಲಿರುವ ಪ್ರಭೇದಗಳ ಪಟ್ಟಿಯಿಂದ ತಗೆದುಹಾಕಿತ್ತು, ಆ ಸಂಧರ್ಭದಲ್ಲಿ ಈ ನಿರ್ಧಾರವನ್ನು ಚೀನಾದ ಅಧಿಕಾರಿಗಳು ಪ್ರಶ್ನೆ ಮಾಡಿದ್ದರು. * ದೈತ್ಯ ಪಾಂಡವನ್ನು ಕರಡಿ ಎಂದೂ ಕರೆಯಲಾಗುತ್ತದೆ, ಇವುಗಳು ದಕ್ಷಿಣ ಮಧ್ಯ ಚೀನಾದ ಸ್ಥಳೀಯ ಪ್ರದೇಶದಲ್ಲಿವೆ, ದೈತ್ಯ ಪಾಂಡಾ ಎಂಬ ಹೆಸರನ್ನು ಕೆಂಪು ಪಾಂಡಾದಿಂದ ಪ್ರತ್ಯೇಕಿಸಲು ಬಳಕೆ ಮಾಡಲಾಗುತ್ತಿದೆ. * ಜೈಂಟ್ ಪಾಂಡಾಗಳು ಮಧ್ಯ ಚೀನಾದ ಕೆಲವು ಪರ್ವತ ಶ್ರೇಣಿಗಳಲ್ಲಿ ವಾಸಿಸುತ್ತಿವೆ, 2007 ರ ವರದಿಯ ಪ್ರಕಾರ, 239 ಪಾಂಡಾಗಳು ಚೀನಾದೊಳಗೆ ಮತ್ತು 27 ಹೊರಗಿನ ದೇಶಗಳಲ್ಲಿ ಸೆರೆಯಲ್ಲಿ ಇವೆ ಎಂದು ತಿಳಿಸಲಾಗಿತ್ತು.