Job Description: * ಬಾಂಗ್ಲಾದೇಶದ ಫುಡ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ ಸಂಭವಿಸಿದೆ, ಈ ಅಗ್ನಿ ಅವಘಡದಲ್ಲಿ ಸದ್ಯ 52 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಪೊಲೀಸರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ಬಾಂಗ್ಲಾದೇಶದ ಢಾಕಾದ ರೂಪಗಂಜ್ನಲ್ಲಿರುವ ಹಾಶೆಮ್ ಫುಡ್ ಆಯಂಡ್ ಬೆವರೇಜ್ ಫ್ಯಾಕ್ಟರಿಯಲ್ಲಿ ಈ ಅಗ್ನಿ ದುರಂತ ನಡೆದಿದೆ. * ಈ ಕಟ್ಟಡದ ಬೆಂಕಿ ನಿಯಂತ್ರಣಕ್ಕೆ ಬಂದ ನಂತರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತವೆ ನಂತರ ನಿಖರ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಅಗ್ನಿ ಶಾಮಕ ದಳದ ವಕ್ತಾರ ದೇಬಾಶಿಶ್ ಬರ್ಧನ್ ಅವರು ತಿಳಿಸಿದ್ದಾರೆ.