Job Description: * 2021 ನೇ ಸಾಲಿನ ಸ್ಕ್ರಿಪ್ಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ 14 ವರ್ಷ ವಯಸ್ಸಿನ ಆಫ್ರಿಕಾ ಮೂಲದ ವಿದ್ಯಾರ್ಥಿನಿ ಜೈಲಾ ಅವಂತ್-ಗಾರ್ಡ್ ಗೆಲುವು ದಾಖಲಿಸಿದ್ದಾರೆ. * ಆಫ್ರಿಕಾ ಮೂಲದ ಸ್ಪರ್ಧಿಯು ಈ ಸ್ಪರ್ಧೆಯ 93 ವರ್ಷಗಳ ಇತಿಹಾಸದಲ್ಲೇ ಮೊದಲಬಾರಿಗೆ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ಭಾರತೀಯ- ಅಮೆರಿಕನ್ನರು ಕೆಲವು ವರ್ಷಗಳಿಂದ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಹಿಡಿತವನ್ನು ಸಾಧಿಸುತ್ತಿದ್ದರು, ಆದರೆ ಈ ಬಾರಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ. * ಭಾರತೀಯ ಅಮೆರಿಕನ್ ಸ್ಯಾನ್ಫ್ರಾನ್ಸಿಸ್ಕೊದ ಸ್ಪರ್ಧಿ 12 ವರ್ಷದ ಚೈತ್ರಾ ತುಮ್ಮಲಾ 2 ನೇ ಸ್ಥಾನ ಹಾಗೂ ನ್ಯೂಯಾರ್ಕ್ನ 13 ವರ್ಷದ ಭಾವನಾ ಮದಿನಿ 3 ನೇ ಸ್ಥಾನ ಪಡೆದುಕೊಂಡಿದ್ದಾರೆ. * ಈ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಚಾಂಪಿಯನ್ ಪಟ್ಟದ ಅಂತಿಮ ಸುತ್ತಿಗೆ ಒಟ್ಟು 11 ಜನ ಆಯ್ಕೆಯಾಗಿದ್ದರು. ಇವರಲ್ಲಿ ಅವಂತ್ ಗಾರ್ಡ್ 'ನ್ಯಾಷನಲ್ ಸ್ಪೆಲ್ಲಿಂಗ್ ಬೀ 2021 ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿಯ ಪ್ರಥಮ ಬಹುಮಾನ 37 ಲಕ್ಷ ರೂ. ಆಗಿದೆ. * 2021 ರ ಈ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಚಾಂಪಿಯನ್ಷಿಪ್ ಪ್ರಶಸ್ತಿಯನ್ನು ಫ್ಲಾರಿಡಾದ ಒರ್ಲ್ಯಾಂಡೊದಲ್ಲಿರುವ ಇಎಸ್ಪಿಎನ್ ವೈಡ್ ವರ್ಲ್ಡ್ ಆಫ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಪ್ರದಾನ ಮಾಡಲಾಗಿದೆ.