Job Description: * ಭಾರತೀಯ ನೌಕಾಪಡೆಯ 3 ಕಿ.ಮೀ ವ್ಯಾಪ್ತಿಯಲ್ಲಿನ ನೌಕಾ ನೆಲೆ, ನೌಕಾ ಘಟಕ ಹಾಗೂ ನೌಕಾದಳಕ್ಕೆ ಸೇರಿದ ಸ್ವತ್ತುಗಳ ಪರವಾನಿಗೆ ಇಲ್ಲದ ಡ್ರೋನ್ ಹಾಗೂ ಮಾನವರಹಿತ ವೈಮಾನಿಕ ವಾಹನಗಳು(UAV)ಹಾರಾಟಕ್ಕೆ ಭಾರತೀಯ ನೌಕಾಪಡೆ ನಿಷೇಧ ಹೇರಿ ಆದೇಶ ಹೊರಡಿಸಿದೆ. * ಒಂದು ವೇಳೆ ನೌಕಾಪಡೆ ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅವುಗಳನ್ನು ನಾಶಪಡಿಸಲಾಗುವುದು ಅಥವಾ ವಶಕ್ಕೆ ಪಡೆದುಕೊಳ್ಳಲಾಗುತ್ತದೆ, ಇದಲ್ಲದೆ ಭಾರತೀಯ ದಂಡ ಸಂಹಿತೆ 121, 121 ಎ, 287, 336, 337 ಮತ್ತು 338 ಸೆಕ್ಷನ್ ಅಡಿಯಲ್ಲಿ ಕ್ರಮ ಜರಿಗಿಸಲಾಗುವದು ಎಂದು ಭಾರತೀಯ ನೌಕಾಪಡೆ ತಿಳಿಸಿದೆ. * ಇತ್ತೀಚಿಗೆ ಜಮ್ಮುವಿನ ಭಾರತೀಯ ವಾಯುನೆಲೆಯ ಮೇಲೆ ಡ್ರೋನ್ ದಾಳಿ ನಡೆದ ಹಿನ್ನೆಲೆಯಲ್ಲಿ ನೌಕಾಪಡೆಯು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.