Job Description: * ಪ್ರಸ್ತುತ ಮ್ಯಾನ್ಕೈಂಡ್ ಫಾರ್ಮಾ ಔಷಧ ತಯಾರಿಕಾ ಸಂಸ್ಥೆಯು ಇದೀಗ ಕೋವಿಡ್-19 ಸಾಂಕ್ರಾಮಿಕ ಸೋಂಕಿಗೆ ಭಾರತೀಯ DRDO ಸಂಸ್ಥೆ ಅಭಿವೃದ್ಧಿಪಡಿಸಿದ 2-ಡಿಜಿ (2 ಡಿಯಾಕ್ಸಿ-ಡಿ-ಗ್ಲೂಕೋಸ್) ಔಷಧ ತಯಾರಿಕೆ ಮತ್ತು ಮಾರುಕಟ್ಟೆಯ ಪರವಾನಿಗೆಯನ್ನು ಪಡೆದುಕೊಂಡಿದೆ. * DRDO ಮತ್ತು ಹೈದರಾಬಾದ್'ನ ಡಾ. ರೆಡ್ಡೀಸ್ ಲ್ಯಾಬೊರೇಟರಿ ಜೊತೆಯಾಗಿ ಅಭಿವೃದ್ಧಿಪಡಿಸಿರುವ 2-DG ಔಷಧವು ಪೌಡರ್ ರೂಪದಲ್ಲಿ ಲಭ್ಯವಿರಲಿದೆ, ಈ 2-DG ಔಷಧದ ವೈದ್ಯಕೀಯ ಪ್ರಯೋಗವನ್ನು ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯಾರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್, DRDO ನಡೆಸಿವೆ. * ಮ್ಯಾನ್ಕೈಂಡ್ ಫಾರ್ಮಾ ಔಷಧ ತಯಾರಿಕಾ ಸಂಸ್ಥೆಯು ಈ 2-DG ಔಷಧವನ್ನು ವಿಶಾಖಪಟ್ಟಣಂ ಮತ್ತು ಹಿಮಾಚಲ ಪ್ರದೇಶದ ತಮ್ಮ ಘಟಕಗಳಲ್ಲಿ ತಯಾರಿಮಾಡುತ್ತೇವೆ ಎಂದು ತಿಳಿಸಿದೆ. * DRDO ಅಭಿವೃದ್ಧಿ ಪಡಿಸಿರುವ ಈ 2-DG ಔಷಧದ 2.34 ಗ್ರಾಂ ಪುಡಿಯ ಪ್ಯಾಕೆಟ್ ಗೆ 990 ರೂ ದರ ನಿಗದಿಪಡಿಸಿ ಮಾರಾಟಕ್ಕೆ ಸಿದ್ಧವಾಗಿತ್ತು.