Job Description: * ಪ್ರಧಾನಿ ನರೇಂದ್ರ ಮೋದಿ ನೇತೃತ್ವ NDA 2.0 ಸರ್ಕಾರವು ಇದೀಗ ಸಚಿವ ಸಂಪುಟ ಪುನರ್ ರಚನೆಯನ್ನು ಮಾಡಿದೆ, ಇದರಲ್ಲಿ ಒಟ್ಟಾರೆ 43 ಜನ ನೂತನ ಸಚಿವರಾಗಿ ಸಂಪುಟ ಸೇರಿಕೊಂಡಿದ್ದಾರೆ. * ನರೇಂದ್ರ ಮೋದಿ ಸಚಿವ ಸಂಪುಟಕ್ಕೆ ಕರ್ನಾಟಕ ರಾಜ್ಯದಿಂದ 4 ಜನ ಸೇರ್ಪಡೆಯಾಗಿದ್ದಾರೆ, - ಚಿತ್ರದುರ್ಗದ ಸಂಸದ: ಎ. ನಾರಾಯಣಸ್ವಾಮಿ, ಉಡುಪಿ-ಚಿಕ್ಕಮಗಳೂರು ಸಂಸದೆ: ಶೋಭಾ ಕರಂದ್ಲಾಜೆ, ಬೀದರ್ ಸಂಸದ: ಭಗವಂತ್ ಖೂಬಾ ಮತ್ತು ರಾಜ್ಯಸಭಾ ಸದಸ್ಯ: ರಾಜೀವ್ ಚಂದ್ರಶೇಖರ್ ಅವರು ಇದೀಗ ಕೇಂದ್ರ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನವನ್ನು ಸ್ವೀಕಾರ ಮಾಡಿದರು. * ನೂತನ 43 ಸಚಿವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. * ಹೊಸದಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರು : ನಾರಾಯಣ ತಾತು ರಾಣೆ, ಸರ್ಬಾನಂದ ಸೋನೊವಾಲ್, ಡಾ. ವಿರೇಂದ್ರ ಕುಮಾರ್, ಜ್ಯೋತಿರಾಧಿತ್ಯ ಸಿಂಧಿಯಾ, ರಾಮಚಂದ್ರ ಪ್ರಸಾದ್ ಸಿಂಗ್, ಅಶ್ವಿನ್ ವೈಷ್ಣವ್, ಪಶುಪತಿ ಕುಮಾರ್ ಪರಾಸ್, ಕಿರಣ್ ರಿಜಿಜು, ರಾಜ್ಕುಮಾರ್ ಸಿಂಗ್, ಹರ್ದೀಪ್ ಸಿಂಗ್ ಪುರಿ, ಮನ್ಶೂಕ್ ಮಾಂಡವಿಯಾ, ಭೂಪೇಂದ್ರ ಯಾದವ್, ಪಿ ರೂಪಾಲ, ಜಿ ಕಿಶನ್ ರೆಡ್ಡಿ, ಅನುರಾಗ್ ಠಾಕೂರ್, ಪಂಕಜ್ ಸಿಂಗ್ ಚೌಧರಿ, ರಾಜೀವ್ ಚಂದ್ರಶೇಖರ್, ಶೋಭ ಕರಂದ್ಲಾಜೆ, ಎ ನಾರಾಯಣಸ್ವಾಮಿ, ಭಗವಂತ್ ಖೂಬಾ, ಅನುಪ್ರಿಯಾ ಸಿಂಗ್ ಪಟೇಲ್, ಸತ್ಯಾಪಾಲ್ ಸಿಂಗ್ ಭಗೇಲ್, ಭಾನುಪ್ರತಾಪ್ ಸಿಂಗ್ ವರ್ಮಾ, ದರ್ಶನಾ ವಿಕ್ರಮ ಜರ್ದೋಶಿ, ಮೀನಾಕ್ಷಿ ಲೇಖಿ, ಅನ್ನಪೂರ್ಣ ದೇವಿ, ಕುಶಾಲ್ ಕಿಶೋರ್, ಅಜಯ್ ಭಟ್ ಸೇರಿದಂತೆ ಒಟ್ಟಾರೆ 43 ನಾಯಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.