Job Description: * ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯು ತಿಳಿಸಿರುವ ಮಾಹಿತಿಯ ಪ್ರಕಾರ ಉತ್ತರ ಕೊರಿಯಾ ರಾಷ್ಟ್ರವು ಈ ವರ್ಷ ಸರಿ ಸುಮಾರು 8,60,000 ಟನ್ ಆಹಾರ ಕೊರತೆಯನ್ನು ಅನುಭವಿಸುತ್ತಿದೆ ಎಂದು ತಿಳಿಸಿದೆ, ಹಾಗೂ ಈ ದೇಶವು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಆಹಾರ ಸಮಸ್ಯೆಯನ್ನು ಎದುರಿಸುವ ಎಲ್ಲ ಸಾಧ್ಯತೆಗಳಿವೆ ಎಂದು ತಿಳಿಸಿದೆ. * ಉತ್ತರ ಕೊರಿಯಾ ದೇಶವು ಇದೀಗ ತನ್ನ ಪರಮಾಣು ಶಸ್ತ್ರ ಹಾಗೂ ಕ್ಷಿಪಣಿ ಕಾರ್ಯಕ್ರಮಗಳಿಗಾಗಿ ಹಲವಾರು ಅಂತರ್ರಾಷ್ಟ್ರೀಯ ಆರ್ಥಿಕ ದಿಗ್ಭಂಧನಗಳನ್ನು ಅನುಭವಿಸುತ್ತಿದೆ. * ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ದೇಶದ ಆರ್ಥಿಕತೆಯ ಮೇಲೆ ಹೆಚ್ಚಿನ ಹೊರೆಯನ್ನು ಹೇರುತ್ತಿದೆ, ಇದೀಗ ಉತ್ತರ ಕೊರಿಯಾ ದೇಶವು ತೀವ್ರ ಆಹಾರ ಕೊರತೆಯನ್ನು ಅನುಭವಿಸುತ್ತಿದ್ದೇವೆ ಎಂದು ಒಪ್ಪಿಕೊಂಡಿದೆ.