Job Description: * ಭಾರತೀಯ ಹಾಕಿಯ ಸುವರ್ಣ ಯುಗದ ಹಾಕಿಪಟು ಕೇಶವ್ ದತ್ ಅವರು ಅನಾರೋಗ್ಯದ ಕಾರಣದಿಂದ ವಿಧಿವಶರಾಗಿದ್ದಾರೆ. * ಕೇಶವ್ ದತ್ ಅವರು 2 ಬಾರಿಯ ಒಲಿಂಪಿಕ್ಸ್ ಸ್ವರ್ಣ ವಿಜೇತ ಹಾಕಿ ತಂಡದ ಸದಸ್ಯರಾಗಿದ್ದರು. * ಕೇಶವ್ ದತ್ ಅವರು 1925 ರ ಡಿ. 29 ರಂದು ಲಾಹೋರ್ನಲ್ಲಿ ಜನಿಸಿದರು, ಹಾಗೂ ಇವರು ಹಾಫ್ಬ್ಯಾಕ್ ಆಟಗಾರನಾಗಿ ಜನಪ್ರಿಯತೇಯನ್ನು ಪಡೆದಿದ್ದರು. * 1948 ರ ಲಂಡನ್ ಒಲಿಂಪಿಕ್ಸ್ ಮತ್ತು 1952 ರ ಹೆಲ್ಸಿಂಕಿ ಒಲಿಂಪಿಕ್ಸ್ನಲ್ಲಿ ಸ್ವರ್ಣ ವಿಜೇತ ಭಾರತ ತಂಡದ ಸದಸ್ಯ ಕೂಡ ಆಗಿದ್ದರು. * ಕೇಶವ ದತ್ ಅವರು 1948 ರ ಒಲಿಂಪಿಕ್ಸ್ಗೂ ಮೊದಲ ಹಾಕಿ ದಂತಕತೆಯಾಗಿರುವ ಮೇಜರ್ ಧ್ಯಾನ್ಚಂದ್ ನಾಯಕತ್ವದಲ್ಲಿ ಪೂರ್ವ ಆಫ್ರಿಕಾ ಪ್ರವಾಸದ ಭಾರತ ತಂಡದಲ್ಲಿದ್ದರು. * ಕೇಶವ ದತ್ ಅವರು 2019 ರಲ್ಲಿ 'ಮೋಹನ್ ಬಗಾನ್ ರತ್ನ' ಗೌರವವನ್ನು ಪಡೆದುಕೊಂಡಿದ್ದರು. * ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹಾಗೂ ಹಾಕಿ ಇಂಡಿಯಾ ಅಧ್ಯಕ್ಷ ಗ್ಯಾನೇಂದೊ ನಿಂಗೋಂಬಮ್ ಅವರು ಕೇಶವ್ ದತ್ ಅವರು ನಿಧನಕ್ಕೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.