Job Description: * ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-19 ವೈರಸ್ನ ಹೊಸ ರೂಪಾಂತರ "ಲ್ಯಾಂಬ್ಡಾ" ಎಂಬ ತಳಿ ಪತ್ತೆಯಾಗಿದೆ ಎಂದು ತಿಳಿಸಿದೆ, ಈ ಕೋವಿಡ್-19 ತಳಿಯ ಸೋಂಕಿನ ಪ್ರಸರಣ ಜಗತ್ತಿಗೆ ಹೊಸ ಅಪಾಯನುಂಟು ಮಾಡುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತ ಪಡಿಸಿದೆ. * ಪ್ರಸ್ತುತ "ಲ್ಯಾಂಬ್ಡಾ" ಎಂಬ ಕೋವಿಡ್-19 ತಳಿಯು ಅಮೆರಿಕ, ಬ್ರಿಟನ್, ಫ್ರಾನ್ಸ್, ಇಟಲಿ, ಜರ್ಮನಿ ಒಟ್ಟಾರೆ 31 ರಾಷ್ಟ್ರಗಳಲ್ಲಿ ಈ "ಲ್ಯಾಂಬ್ಡಾ" ತಳಿಯ ಸೋಂಕಿನ ಪ್ರಕರಣಗಳು ವರದಿಯಾಗಿವೆ ಎಂದು ತಿಳಿದು ಬಂದಿದೆ. * ಪ್ರಸ್ತುತ ಬ್ರಿಟನ್'ನ ಆರೋಗ್ಯ ಸಂಸ್ಥೆ 'ಪಬ್ಲಿಕ್ ಹೆಲ್ತ್ ಇಂಗ್ಲೆಂಡ್'ನ ವಿಜ್ಞಾನಿಗಳು ನೀಡಿರುವ ಮಾಹಿತಿ ಪ್ರಕಾರ ಈ ಲ್ಯಾಂಬ್ಡಾ ತಳಿಯ ಸೋಂಕು ತೀವ್ರವಾಗಿ ಪ್ರಸರಿಸಬಹುದಾಗಿದೆ, ಆದರೆ ಈ ವಿಷಯದ ಬಗ್ಗೆ ಯಾವುದೇ ಪುಷ್ಟೀಕರಿಸುವ ವೈಜ್ಞಾನಿಕ ಆಧಾರಗಳು ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.