Job Description: * ಪಶ್ಚಿಮ ಅಸ್ಸಾಂ'ನ ಚಿರಾಂಗ್ ಮೀಸಲು ಅರಣ್ಯದ ಜಾರ್ಬರಿ ಶ್ರೇಣಿಯಲ್ಲಿ 2 ಜಾತಿಯ ಜೇಡಗಳು ಪತ್ತೆಯಾಗಿವೆ, ಈ 2 ಜಾತಿಯ ಜೇಡಗಳು ಒಂದೇ ಜಾಗವನ್ನು ಹಂಚಿಕೊಳ್ಳುತ್ತಿವೆ. * ಗ್ರೇವೆಲಿಯಾ ಬೊರೊ ಎಂಬ ಬಿಲ ಜೇಡ ಹೊಸದಾಗಿ ಪತ್ತೆಯಾಗಿದೆ, ಇದನ್ನು 129 ವರ್ಷಗಳ ಹಿಂದೆ ಸ್ವೀಡಿಷ್ ಅರಾಕ್ನಾಲಜಿಸ್ಟ್, ಟೋರ್ಡ್ ಟ್ಯಾಮೆರ್ಲಾನ್ ಟಿಯೋಡರ್ ಥೋರೆಲ್ ಅವರು ತಿಳಿಸಿದ ನಂತರ ಮೊದಲ ಬಾರಿಗೆ ದಾಖಲಿಸಲಾಗಿದೆ. * ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದಿಂದ ಈ 2 ಜೇಡಗಳನ್ನು ಪತ್ತೆಹಚ್ಚಲಾಗಿದೆ. * ಗ್ರೇವೆಲಿಯಾ ಬೊರೊ ನೆಮೆಸಿಡೆ ಕುಟುಂಬಕ್ಕೆ ಸೇರಿದೆ, ಹಾಗೂ ಡೆಕ್ಸಿಪ್ಪಸ್ ಕ್ಲೈನಿ ಸಾಲ್ಟಿಸಿಡೆ ಕುಟುಂಬಕ್ಕೆ ಸೇರಿದೆ ಇದು ಭೂಮಿಯ ಮೇಲಿನ ಎಲ್ಲಾ ಜೇಡಗಳ ಅತಿದೊಡ್ಡ ಜೇಡ ಕುಟುಂಬವಾಗಿದೆ. * ವಿಷಪೂರಿತ ಹಾವನ್ನು ಪ್ರಸ್ತುತ ಮಿಜೋರಾಂ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಭಾರತದ ಹರ್ಪಿಟೋಫೂನಾಗೆ ಸೇರಿಸಿದೆ, ಹಾಗೂ ಇದು ಐಜಾಲ್'ನ ಟುಯಿಂಗ್ಹಲೆಂಗ್ ನದಿಪಾತ್ರದ ಒಣಗಿದ ಪ್ರದೇಶದಲ್ಲಿ ಕಂಡು ಬಂದಿದೆ. * ಇದು ಭಾರತದ ಸ್ಟೋಲಿಜ್ಕಿಯಾ ಕುಲದ 3 ನೇ ಜಾತಿಯ ಹಾವಾಗಿದೆ, ಮಿಜೊ ಯೋಧನಾಗಿದ್ದ ವ್ಯಾನ್ನುಯೆಲಿಯಾನಾ ಅವರಿಗೆ ಗೌರವ ನೀಡುವದಕ್ಕಾಗಿ ಈ ಹಾವನ್ನು ಸ್ಟೋಲಿಜ್ಕಿಯಾ ವಾನ್ಹುಯೆಲಿಯಾನೈ ಎಂದು ಹೆಸರಿಸಲಾಗಿದೆ.