Job Description: * ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ವೀರಭದ್ರ ಸಿಂಗ್ ಅವರು ತಮ್ಮ 87 ನೇ ವರ್ಷ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. * ವೀರಭದ್ರ ಸಿಂಗ್ ಅವರು 9 ಬಾರಿ ಶಾಸಕರಾಗಿ ಮತ್ತು 5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. * ವೀರಭದ್ರ ಸಿಂಗ್ ಅವರು 6 ಬಾರಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ, ಹಾಗೂ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ 1998 ರಿಂದ 2003 ರ ವರೆಗೆ ಸೇವೆ ಸಲ್ಲಿಸಿದ್ದಾರೆ. * ಮಾಜಿ ಮುಖ್ಯ ಮಂತ್ರಿ ವೀರಭದ್ರ ಸಿಂಗ್ ಅವರು ನಿಧನಕ್ಕೆ ಈಗಿನ ಹಿಮಾಚಲ ಮುಖ್ಯಮಂತ್ರಿ ಜೈರಾಂ ಠಾಕೂರ್, ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸಂತಾಪ ಸೂಚಿಸಿದ್ದಾರೆ.