Job Description: * ಹೈಟಿ ದೇಶದ ಅಧ್ಯಕ್ಷ ಜೊವೆನೆಲ್ ಮೊಯಿಸ್ ಅವರ ಹತ್ಯೆಯಾಗಿದೆ, ಈ ಹತ್ಯೆಗೆ ಸಂಬಂಧಿಸಿದ ನಾಲ್ಕು ಹಂತಕರನ್ನು ಹೈಟಿಯ ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ, ಹಾಗೂ ಇನ್ನುಳಿದ ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಿದ್ದಾರೆ ಎಂದು ಹೈಟಿಯ ಪೊಲೀಸ್ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. * ಹೈಟಿ ರಾಷ್ಟ್ರವು ಅಮೇರಿಕ ಖಂಡದಲ್ಲೇ ಅತ್ಯಂತ ಬಡ ರಾಷ್ಟ್ರವಾಗಿದೆ. * 2017 ರಿಂದ ಜೊವೆನೆಲ್ ಮೊಯಿಸ್ ಅವರು ಹೈಟಿ ದೇಶದ ಅಧ್ಯಕ್ಷರಾಗಿ ಅಧಿಕಾರವನ್ನು ನಡೆಸುತ್ತಿದ್ದರು. * ಈ ಹಿಂದೆ 2010 ರಲ್ಲಿ ಉಂಟಾದ ಭೂಕಂಪ ಹಾಗೂ 2016 ರಲ್ಲಿ ಉಂಟಾದ ಮ್ಯಾಥ್ಯೂ ಚಂಡಮಾರುತಗಳು ಈ ಹೈಟಿ ದೇಶವನ್ನು ಸಂಕಷ್ಟಕ್ಕೆ ಒಳಪಡಿಸಿದ್ದವು. * ಜೊವೆನೆಲ್ ಮೊಯಿಸ್ ಅವರ ಅಧಿಕಾರ ಅವಧಿಯು ಫೆಬ್ರುವರಿ ತಿಂಗಳಿನಲ್ಲಿ ಅಂತ್ಯವಾದ ಹಿನ್ನಲೆಯಿಂದಾಗಿ ಇವರಿಗೆ ರಾಜೀನಾಮೆಯನ್ನು ನೀಡಿ ಎಂದು ಒತ್ತಡ ಹೇರಲಾಗಿತ್ತು.