Job Description: * ಭಾರತದ ಮೊದಲ ಫಾಸ್ಟ್ಯಾಗ್ ಅಥವಾ UPI ಆಧಾರಿತ ಪಾರ್ಕಿಂಗ್ ಸೌಲಭ್ಯವನ್ನು ದೆಹಲಿ ಮೆಟ್ರೋ ರೈಲು ನಿಗಮ 2021 ರ ಜುಲೈ 6 ರಂದು ಪ್ರಾರಂಭಿಸಿದೆ. * ಈ UPI ಆಧಾರಿತ ಕ್ಯಾಶ್ಲೆಸ್ ಪಾರ್ಕಿಂಗ್'ನಿಂದಾಗಿ ಪ್ರವೇಶ ಮತ್ತು ಪಾವತಿಗಾಗಿ ಸಮಯವನ್ನು ಕಡಿಮೆ ಮಾಡಲು ಈ ಸೌಲಭ್ಯವನ್ನು ಆರಂಭಿಸಿದ್ದಾರೆ. * ಈ ಯುಪಿಐ ಆಧಾರಿತ ಪಾರ್ಕಿಂಗ್ ಸೌಲಭ್ಯವನ್ನು ಕಾಶ್ಮೀರಿ ಗೇಟ್ ಮೆಟ್ರೋ ನಿಲ್ದಾಣದಲ್ಲಿ ದೆಹಲಿ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಗು ಸಿಂಗ್ ಅವರು ಆರಂಭಿಸಿದರು. * ಪ್ರಸ್ತುತ 4-ವೀಲರ್ಗಳ ಪ್ರವೇಶ ಮತ್ತು ನಿರ್ಗಮನ ಪಾವತಿಯನ್ನು ಫಾಸ್ಟ್ಟ್ಯಾಗ್ ಮೂಲಕ ಮಾಡಬಹುದಾಗಿದೆ, ಈ ಸೌಲಭ್ಯವು ಫಾಸ್ಟ್ಯಾಗ್ ಹೊಂದಿರುವ ವಾಹನಗಳನ್ನು ಅದರ ಅಡಿಯಲ್ಲಿ ನಿಲ್ಲಿಸಲು ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ. * 2-ವೀಲರ್ಗಳ ಪ್ರವೇಶವನ್ನು ದೆಹಲಿ ಮೆಟ್ರೋ ಸ್ಮಾರ್ಟ್ ಕಾರ್ಡ್ ಬಳಸುವ ಮೂಲಕ ಮಾತ್ರ ಮಾಡಬಹುದು. * ಸರ್ಕಾರದ ಡಿಜಿಟಲ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಈ ನಗದುರಹಿತ ಪಾರ್ಕಿಂಗ್ ಯೋಜನೆಯು ಒಂದು ಉತ್ತಮ ಹೆಜ್ಜೆಯಾಗಲಿದೆ ಎಂದು ತಿಳಿಸಿದ್ದಾರೆ.