Job Description: * ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಂಗ್ಲಾದೇಶದ ಪ್ರಧಾನಿಯಾಗಿರುವ ಶೇಖ್ ಹಸೀನಾ ಅವರು ಸ್ನೇಹದ ಸಂಕೇತವಾಗಿ 2,600 ಕೆ.ಜಿ "ಹರಿಭಾಂಗ" ತಳಿಯ ಮಾವಿನ ಹಣ್ಣು ಉಡುಗೊರೆಯಾಗಿ ನೀಡಿದ್ದಾರೆ. * ಡೈಲಿ ಸ್ಟಾರ್ ಪತ್ರಿಕೆ ನೀಡಿರುವ ವರದಿಯ ಪ್ರಕಾರ ಮಾವಿನ ಹಣ್ಣು ಹೊತ್ತ ಟ್ರಕ್ ಜೆಸ್ಸೋರ್'ನ ಬೆನಾಪೋಲ್ ಮೂಲಕ ಭಾರತ ಗಡಿಯನ್ನು ಪ್ರವೇಶಿಸಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಉಡುಗೊರೆಯಾಗಿ ನೀಡಿರುವ ಈ ಹರಿಭಾಂಗ ಮಾವಿನ ಹಣ್ಣಿನ ತಳಿಯನ್ನು ಬಾಂಗ್ಲಾದ ರಂಗ್ಪುರ ಪ್ರದೇಶದಲ್ಲಿ ಬೆಳೆಯುತ್ತಾರೆ ಎಂದು ಢಾಕಾ ಟ್ರಿಬ್ಯೂನ್ ಪತ್ರಿಕೆ ಮಾಹಿತಿ ನೀಡಿದೆ. * ಬಾಂಗ್ಲಾ ದೇಶಕ್ಕಿಂತ ಮೊದಲು ಪಾಕಿಸ್ತಾನದ ಮಾಜಿ ಪ್ರಧಾನಿಗಳಾದ ಜಿಯಾ ಉಲ್ ಹಕ್ ಹಾಗೂ ಪರ್ವೇಜ್ ಮುಷರಫ್ ಸಹ ಈ ಹಿಂದೆ ಭಾರತಕ್ಕೆ ಮಾವಿನ ಹಣ್ಣುಗಳನ್ನು ಉಡುಗೊರೆಯಾಗಿ ನೀಡಿದ್ದರು.