Job Description: * ಸಿಂಧೂ ಒಪ್ಪಂದದ ಪ್ರಕಾರ ಭಾರತವು ಸ್ವಂತ ಭೂಮಿಗೆ ನೀರಾವರಿ ಮಾಡಲು ಹೆಚ್ಚುವರಿ ನೀರನ್ನು ಬಳಸುವುದು ಎಂದರ್ಥ. * ಪ್ರಸ್ತುತ 1960ರ ಸಿಂಧೂ ನದಿ ನೀರಿನ ಒಪ್ಪಂದದ ಪ್ರಕಾರ ಪಾಕಿಸ್ತಾನಕ್ಕೆ ಹೆಚ್ಚುವರಿ ನೀರು ಹರಿಯುವುದನ್ನು ತಡೆಯಲು ಭಾರತವು ತನ್ನ ಹಕ್ಕುಗಳಿಗಾಗಿ ಕೆಲಸ ಮಾಡಲು ಆರಂಭಿಸಿದೆ ಎಂದು ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರು ತಿಳಿಸಿದ್ದಾರೆ. * ಸಿಂಧೂ ನೀರಿನ ಒಪ್ಪಂದಕ್ಕೆ ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರಗಳು ಸತತ ಒಂಬತ್ತು ವರ್ಷಗಳ ಮಾತುಕತೆಯ ತದನಂತರ 1960 ರಲ್ಲಿ ಸಹಿ ಹಾಕಿವೆ, ಜೊತೆಗೆ ವಿಶ್ವಬ್ಯಾಂಕ್ ಕೂಡ ಈ ಒಪ್ಪಂದಕ್ಕೆ ಸಹಿ ಹಾಕಿದೆ. * 1960 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ವಾಟರ್ ಒಪ್ಪಂದಕ್ಕೆ ಸಹಿ ಹಾಕಲಾಗಿದೆ, ಈ ಒಪ್ಪಂದದ ಮಾಹಿತಿಯ ಪ್ರಕಾರ 3 ಪೂರ್ವ ನದಿಗಳಾಗಿರುವ ರಾವಿ, ಸಟ್ಲೆಜ್ ಮತ್ತು ಬಿಯಾಸ್'ನ ಎಲ್ಲಾ ನೀರನ್ನು ಭಾರತಕ್ಕೆ ಪ್ರತ್ಯೇಕವಾಗಿ ಬಳಸಲು ಹಂಚಿಕೆಯನ್ನು ಮಾಡಲಾಯಿತು,ಹಾಗೆ ಪಾಶ್ಚಿಮಾತ್ಯ ನದಿಗಳಾಗಿರುವ ಸಿಂಧೂ, ಝೇಲಂ ಹಾಗೂ ಚೆನಾಬ್ ನೀರನ್ನು ಪಾಕಿಸ್ತಾನಕ್ಕೆ ಹಂಚಿಕೆ ಮಾಡಲಾಯಿತು. * ಆದರೆ ಪಾಶ್ಚಿಮಾತ್ಯ ನದಿಗಳ ನೀರನ್ನು ನಿರ್ದಿಷ್ಟವಾಗಿ ಪಾಕಿಸ್ತಾನಕ್ಕೆ ಬಳಕೆಯಾಗದ ಹಾಗೂ ಕೃಷಿ ಬಳಕೆಗಾಗಿ ಬಳಸಲು ಭಾರತಕ್ಕೆ ವಿನಾಯಿತಿಯನ್ನು ಈ ಒಪ್ಪಂದದಲ್ಲಿ ನೀಡಲಾಗಿದೆ, ಮತ್ತು ಭಾರತಕ್ಕೆ ನದಿ ಯೋಜನೆಗಳ ಅಡಿಯಲ್ಲಿ ಜಲವಿದ್ಯುತ್ ಉತ್ಪಾದಿಸುವ ಹಕ್ಕನ್ನು ನೀಡಲಾಗಿದೆ.