Job Description: * ಪ್ರಸ್ತುತ ಡಿಜಿಟಲ್ ಪಾವತಿ ಪ್ಲಾಟ್ಫಾರ್ಮ್ ಫೋನ್ ಪೇ - ಫ್ಲಿಪ್ಕಾರ್ಟ್ನೊಂದಿಗೆ ಜೊತೆಯಾಗಿ ಫ್ಲಿಪ್ಕಾರ್ಟ್ನ ಪೇ-ಆನ್-ಡೆಲಿವರಿ ಆದೇಶಗಳಿಗಾಗಿ ಸಂಪರ್ಕವಿಲ್ಲದ "ಸ್ಕ್ಯಾನ್ ಮತ್ತು ಪೇ" ವೈಶಿಷ್ಟ್ಯವನ್ನು ಪ್ರಾರಂಭಿಸಲು ಮುಂದಾಗಿದೆ. * ಈ ಫೋನ್ ಪೇ'ಯ ಕ್ಯೂಆರ್ ಕೋಡ್ ಗ್ರಾಹಕರಿಗೆ ಉತ್ಪನ್ನ ವಿತರಣೆಯ ಸಮಯದಲ್ಲಿ ಯುಪಿಐ(UPI) ಅಪ್ಲಿಕೇಶನ್ಗಳ ಮೂಲಕ ಡಿಜಿಟಲ್ ರೂಪದಲ್ಲಿ ಪಾವತಿಸಲು ಸಹಾಯ ಮಾಡಲಿದೆ. ಇದರಿಂದಾಗಿ ಸುರಕ್ಷತೆಯನ್ನು ಖಾತರಿಪಡಿಸುವ ಸಂದರ್ಭದಲ್ಲಿ ವೈಯಕ್ತಿಕ ಸಂಪರ್ಕವನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ. * ನಗದು ಆಧಾರಿತ ಪಾವತಿಗಳ ಡಿಜಿಟಲೀಕರಣವು ಇ-ಕಾಮರ್ಸ್'ಗೆ ಉತ್ತೇಜನವನ್ನು ನೀಡಲಿದೆ ಎಂದಿದ್ದಾರೆ, ಹಾಗೂ ಈ ಸೌಲಭ್ಯವು ಫೋನ್ಪೇ ಕ್ಯೂಆರ್ ಕೋಡ್'ನ್ನು ಸ್ಕ್ಯಾನ್ ಮಾಡಿ ಗ್ರಾಹಕರಿಗೆ ಪಾವತಿಸಲು ಅವಕಾಶ ಮಾಡಿಕೊಡಲಿದೆ, ಹಾಗೂ ಗ್ರಾಹಕರು ಮನೆಯಿಂದ ಸಂಪರ್ಕವಿಲ್ಲದ ಫ್ಲಿಪ್ಕಾರ್ಟ್ನಿಂದ ವಿತರಣೆಯ ಪಾವತಿಗಳನ್ನು ಮಾಡಬಹುದಾಗಿದೆ. * ಪ್ರಸ್ತುತ ಫೋನ್ಪೇ ಭಾರತೀಯ ಡಿಜಿಟಲ್ ಪಾವತಿ ಮತ್ತು ಹಣಕಾಸು ಸೇವೆಯಾಗಿದೆ,ಇದನ್ನು 2015 ರ ಡಿಸೆಂಬರ್'ನಲ್ಲಿ ಸ್ಥಾಪನೆಯಾಗಿದೆ, ಇದರ ಪ್ರಧಾನ ಕಚೇರಿಯು ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿದೆ. * ಈ ಫೋನ್ ಪೇ'ಯನ್ನು ಸಮೀರ್ ನಿಗಮ್, ರಾಹುಲ್ ಚಾರಿ ಮತ್ತು ಬುರ್ಜಿನ್ ಎಂಜಿನಿಯರ್ ಸ್ಥಾಪಿಸಿದ್ದಾರೆ, ಈ ಫೋನ್ ಪೇ ಅಪ್ಲಿಕೇಶನ್ ಭಾರತೀಯ 11 ಭಾಷೆಗಳಲ್ಲಿ ಲಭ್ಯವಿದೆ. * ಪ್ರಸ್ತುತ ಈ ಅಪ್ಲಿಕೇಶನ್ ಮೂಲಕ ಹಣವನ್ನು ಕಳುಹಿಸಲು ಹಾಗೂ ಸ್ವೀಕರಿಸಲು, ಡೇಟಾ ಕಾರ್ಡ್ಗಳು, ರೀಚಾರ್ಜ್ ಮೊಬೈಲ್, ಡಿಟಿಎಚ್, ಅಂಗಡಿಗಳಲ್ಲಿ ಪಾವತಿಸಲು, ಯುಟಿಲಿಟಿ ಪಾವತಿಗಳನ್ನು ಮಾಡಲು, ತೆರಿಗೆ ಉಳಿತಾಯ ನಿಧಿಗಳು ಮತ್ತು ದ್ರವ ನಿಧಿಗಳಲ್ಲಿ ಹೂಡಿಕೆ ಮಾಡಲು ಬಳಕೆ ಮಾಡಲಾಗುತ್ತದೆ. ವಿಮೆ, ಮ್ಯೂಚುವಲ್ ಫಂಡ್ ಮತ್ತು ಚಿನ್ನವನ್ನು ಖರೀದಿಸಲು ಇದನ್ನು ಬಳಸಬಹುದು. * ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಯುಪಿಐ ಅಭಿವೃದ್ಧಿಪಡಿಸಿದೆ, ಹಾಗೂ ತ್ವರಿತ ನೈಜ-ಸಮಯ ಪಾವತಿ ವ್ಯವಸ್ಥೆ ಇದಾಗಿದೆ, ಹಾಗೂ ಮೊಬೈಲ್ ಪ್ಲಾಟ್ಫಾರ್ಮ್'ನಲ್ಲಿ 2 ಬ್ಯಾಂಕ್ ಖಾತೆಗಳ ಮಧ್ಯೆ ಹಣವನ್ನು ತಕ್ಷಣ ವರ್ಗಾಯಿಸುವ ಕಾರ್ಯನಿರ್ವಹಿಸುತ್ತದೆ.