Job Description: * 2021 ರ ಜುಲೈ. 3 ರಂದು ದಕ್ಷಿಣ-ಮಧ್ಯ ಕ್ಯೂಬಾಗೆ ಉಷ್ಣವಲಯದ ಬಿರುಗಾಳಿಯಾಗಿರುವ ಎಲ್ಸಾ ತಲುಪಿದೆ ಎಂದು ತಿಳಿದು ಬಂದಿದೆ. * ಈ ಉಷ್ಣವಲಯದ ಬಿರುಗಾಳಿ ಎಲ್ಸಾ ಕ್ಯೂಬಾದ ಮೇಲೆ ಹಾದು ಹೋಗುವಕ್ಕಿಂತ ಮೊದಲು ಹೆಚ್ಚು ಬಲಶಾಲಿಯಾಗಲಿದೆ ಎಂದು ಯು.ಎಸ್. ನ್ಯಾಷನಲ್ ಹರಿಕೇನ್ ಸೆಂಟರ್ ಮಾಹಿತಿ ನೀಡಿದೆ, ಪ್ರಸ್ತುತ ಈ ಬಿಸಿಗಾಳಿಯ ಗರಿಷ್ಠ ಬೀಸುವ ವೇಗವು ಗಂಟೆಗೆ 100 ಕಿ.ಮೀ. ಇರಲಿದೆ ಎಂದು ತಳಿಸಿದ್ದಾರೆ. * ಎಲ್ಸಾ ಎಂಬುವದು ಉಷ್ಣವಲಯದ ಚಂಡಮಾರುತವಾಗಿದೆ, ಹಾಗೂ ಇದು ಕೆರಿಬಿಯನ್ ಹಾಗೂ ಆಗ್ನೇಯ ಯುನೈಟೆಡ್ ಸ್ಟೇಟ್ಸ್ನ ಭಾಗಗಳ ಮೇಲೆ ಅತೀ ಹೆಚ್ಚು ಪರಿಣಾಮ ಬೀರಲಿದೆ ಎಂದಿದ್ದಾರೆ, ಇದು 2021 ರ 5 ನೇ ಹೆಸರಿನ ಚಂಡಮಾರುತ ಹಾಗೂ ಮೊದಲ ಚಂಡಮಾರುತ ಇದಾಗಿದೆ. * ರಾಷ್ಟ್ರೀಯ ಚಂಡಮಾರುತ ಕೇಂದ್ರವು ಜೂನ್. 29 ರಂದು ಎಲ್ಸಾವನ್ನು ಉಷ್ಣವಲಯದ ಅಲೆಯಾಗಿದೆ ಎಂದು ಪ್ರಥಮ ಬಾರಿ ಮೇಲ್ವಿಚಾರಣೆಯನ್ನು ಮಾಡಿತ್ತು, ಈ ಹಿಂದೆ 2005 ರಲ್ಲಿನ ಎಮಿಲಿ ಚಂಡಮಾರುತದ ತದನಂತರ ಪೂರ್ವ ಕೆರಿಬಿಯನ್ ಸಮುದ್ರದಲ್ಲಿ ಪ್ರಬಲ ಚಂಡಮಾರುತ ಇದಾಗಿದೆ ಹಾಗೂ ಇದು ಅಟ್ಲಾಂಟಿಕ್ ಉಷ್ಣವಲಯದ ವೇಗವಾಗಿ ಚಲಿಸುವ ಚಂಡಮಾರುತ ಇದಾಗಿದೆ ಎಂದು ತಿಳಿಸಿದ್ದಾರೆ, ಹಾಗೂ ಈ ಚಂಡಮಾರುತವು ವಾಯುವ್ಯ ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸಲಿದೆ ಎಂದು ತಿಳಿಸಿದ್ದಾರೆ.