Job Description: * ಭಾರತದ ಕೋವಿಡ್ ಲಸಿಕಾ ಅಭಿಯಾನದ ತಂತ್ರಜ್ಞಾನ ವೇದಿಕೆಯಾಗಿರುವ ಕೋವಿನ್ ಆಯಪ್'ನ್ನು ಜಾಗತಿಕ ಮಟ್ಟದ ಬಳಕೆಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೋವಿನ್ ಗ್ಲೋಬಲ್ ಕಾನ್ಕ್ಲೇವ್'ನಲ್ಲಿ ತಿಳಿಸಿದ್ದಾರೆ. * ಪ್ರಧಾನಿ ಮೋದಿ ಅವರು ಈ ಕಾರ್ಯಕ್ರಮಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು, ಈ ಕೋವಿಡ್-19 ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಭಾರತವು ತನ್ನ ಅನುಭವ ಹಾಗೂ ಸಂಪನ್ಮೂಲಗಳನ್ನು ಸಮುದಾಯದ ಜೊತೆ ಹಂಚಿಕೊಳ್ಳಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. * ಇದೇ ಸಂದರ್ಭದಲ್ಲಿ ಮೋದಿ ಅವರು ಯಾವುದೇ ದೇಶವು ಎಷ್ಟೇ ಪ್ರಬಲವಾದರೂ ಈ ರೀತಿಯ ಸಾಂಕ್ರಾಮಿಕವನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವಾಗದು ಎಂದು ತೋರಿಸಿಕೊಟ್ಟಿದೆ. * ಈ ಕೋವಿನ್ ಆಯಪ್ ಲಸಿಕಾ ಅಭಿಯಾನವನ್ನು ಅಳವಡಿಸಿಕೊಳ್ಳಲು ಸುಮಾರು 50 ಕ್ಕೂ ಅಧಿಕ ದೇಶಗಳು ಆಸಕ್ತಿ ತೋರಿಸಿವೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ತಿಳಿಸಿದೆ.