Job Description: * ಗ್ರೀನ್ ಇಂಡಿಯನ್ ಚಾಲೆಂಜ್ ಇದೀಗ ನಾಲ್ಕು ವರ್ಷ ಪೂರೈಸಿದೆ ಇದರ ಅಂಗವಾಗಿ ತೆಲಂಗಾಣ ರಾಜ್ಯದ ಆದಿಲಾಬಾದ್ ಜಿಲ್ಲೆಯಲ್ಲಿ ಕೇವಲ 1 ಗಂಟೆಯಲ್ಲಿ 1 ಮಿಲಿಯನ್ ಸಸಿಗಳನ್ನ ನೆಟ್ಟು ವಿಶ್ವ ದಾಖಲೆಯನ್ನ ನಿರ್ಮಿಸಿದ್ದಾರೆ. * ಪ್ರಸ್ತುತ ವಂಡರ್ ಬುಕ್ ಆಫ್ ರೆಕಾರ್ಡ್ ತೆಲಂಗಾಣ ರಾಜ್ಯದ ಆದಿಲಾಬಾದ್ ಜಿಲ್ಲೆಯಲ್ಲಿಯ ಕೆಲಸಗಾರರ ಈ ಕಾರ್ಯವನ್ನ ಮೆಚ್ಚಿ ಈ ಕೆಲಸಗಾರರಿಗೆ ಮತ್ತು ಸಂಘಟಕರಿಗೆ ಮೆಚ್ಚುಗೆ ಪತ್ರವನ್ನ ನೀಡಿದೆ. * ಈ ಕಾರ್ಯಕ್ರಮದಲ್ಲಿ ಸುಮಾರು 5 ಲಕ್ಷ ಸಸಿಗಳನ್ನು 200 ಎಕರೆ ಜಾಗದಲ್ಲಿ ಮಿಯಾವಕಿ ಮಾದರಿಯಲ್ಲಿ ನೆಡಲಾಗಿದೆ, ಹಾಗೂ 30 ಸಾವಿರಕ್ಕೂ ಹೆಚ್ಚು ಟಿಆರ್ಎಸ್ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. * ಈ ಹಿಂದೆ 2019 ರಲ್ಲಿ ಟರ್ಕಿ 3.03 ಲಕ್ಷ ಗಿಡಗಳನ್ನು ಕೇವಲ 1 ಗಂಟೆಯಲ್ಲಿ ನೆಟ್ಟು ವಿಶ್ವ ದಾಖಲೆ ನಿರ್ಮಿಸಿತ್ತು.