Job Description: * ಪ್ರಸ್ತುತ ತಾಲಿಬಾನ್ ಉಗ್ರಪಡೆಗಳು ಅಫ್ಘಾನಿಸ್ತಾನದ ಕೆಲವು ಜಿಲ್ಲೆಗಳನ್ನು ವಶಪಡಿಸಿಕೊಂಡಿವೆ, ಇತ್ತೀಚಿಗೆ ಅಮೇರಿಕ 2 ದಶಕಗಳ ಬಳಿಕ ಆಫ್ಘಾನಿಸ್ತಾನದ ಬಗ್ರಾಮ್ ವಾಯುನೆಲೆಯನ್ನು ತೊರೆದ ಹಿನ್ನಲೆಯಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. * ಅಫ್ಘಾನಿಸ್ತಾನದ ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ, ತಾಲಿಬಾನ್ ಉಗ್ರಪಡೆಗಳ ಬೆದರಿಕೆಗೆ ಅಫ್ಘಾನಿಸ್ತಾನದ ಮಿಲಿಟರಿ ಪಡೆಯು ಆ ಪ್ರದೇಶದಿಂದ ಸ್ಥಳಾಂತರಗೊಂಡಿದೆ ಹಾಗೂ ನೂರಾರು ಜನಗಳು ತಜಕಿಸ್ತಾನದ ಗಡಿ ಪ್ರದೇಶಕ್ಕೆ ಪ್ರಯಾಣವನ್ನು ಬೆಳಸಿದ್ದಾರೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ತಜಕಿಸ್ತಾನದ ಅಧಿಕಾರಿಗಳು ಅಫ್ಘಾನಿಸ್ತಾನದ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆಗಳಿಗೆ "ಮಾನವತಾವಾದ ಹಾಗೂ ಉತ್ತಮ ನೆರೆಹೊರೆಯ ತತ್ವಗಳ" ಕಾರಣದಿಂದಾಗಿ ತಜಕಿಸ್ತಾನಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. * ತಾಲಿಬಾನ್ ಉಗ್ರಪಡೆಗಳು ಅಫ್ಘಾನಿಸ್ತಾನದ 421 ಜಿಲ್ಲೆಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ 3 ನೇ ಒಂದು ಭಾಗವನ್ನು ವಶಪಡಿಸಿಕೊಂಡಿದೆ ಎಂದು ತಿಳಿದು ಬಂದಿದೆ.