Job Description: * ಇತ್ತೀಚಿಗೆ ದೇಶದ ಹವಾಮಾನ ತಜ್ಞರ ಸಂಶೋಧನಾ ಪತ್ರಿಕೆಯುಲ್ಲಿ ಪ್ರಕಟಿಸಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಈ ಹಿಂದೆ ಕಳೆದಿರುವ 50 ವರ್ಷಗಳಲ್ಲಿ 17 ಸಾವಿರಕ್ಕೂ ಅಧಿಕ ಜನರು ಬಿಸಿಗಾಳಿಯಿಂದ ಮೃತಪಟ್ಟಿದ್ದಾರೆ. * 1971-2019 ರವರೆಗೂ ದೇಶದಲ್ಲಿನ ಬಿಸಿಗಾಳಿಯ ಅಧ್ಯಯನ. * ಬಿಸಿಗಾಳಿಯಿಂದ ಮೃತಪಟ್ಟವರ ಮಾಹಿತಿಯು, ಪ್ರಸ್ತುತ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿಯಾಗಿರುವ ಎಂ ರಾಜೀವನ್ ಹಾಗೂ ವಿಜ್ಞಾನಿಗಳಾದ ಕಮಲ್ಜಿತ್ ರೇ, ಎಸ್ ಎಸ್ ರೇ, ಆರ್ ಕೆ ಗಿರಿ ಮತ್ತು ಎಪಿ ದಿಮ್ರಿ ಈ ವರ್ಷದ ಪ್ರಾರಂಭದಲ್ಲಿ ಪ್ರಕಟಿಸಿರುವ ಸಂಶೋಧನಾ ಪತ್ರಿಕೆಯಲ್ಲಿ ಈ ಮಾಹಿತಿ ಲಭ್ಯವಾಗಿದೆ. * ಕಳೆದ 50 ವರ್ಷಗಳಲ್ಲಿ ಹವಾಮಾನ ಕಾರಣಗಳಿಂದ 1,41,308 ಜನರು ಮೃತಪಟ್ಟಿದ್ದಾರೆ, ಇದರಲ್ಲಿ ಸುಮಾರು 17,362 ಜನರು ಬಿಸಿಗಾಳಿಯಿಂದ ಮೃತಪಟ್ಟಿದ್ದಾರೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. * ಬಿಸಿಗಾಳಿಯಿಂದ ಸಾವಿನ ಪ್ರಕರಣಗಳು ವರದಿಯಾದ ರಾಜ್ಯಗಳು: ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಓಡಿಶಾ. * ಪ್ರಸ್ತುತ ಅತ್ಯಂತ ಹೆಚ್ಚಿನ ಬಿಸಿಗಾಳಿಯ ವಲಯಗಳು: ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಛತ್ತೀಸ್ ಗಢ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯ ಪ್ರದೇಶಗಳು.