Job Description: * ವಿಶ್ವದ ಅತ್ಯಂತ ನವೀನ ಪ್ರಚಾರ ಸಂಸ್ಥೆಯು 2021 ರ ಪ್ರಶಸ್ತಿಯನ್ನು ಇನ್ವೆಸ್ಟ್ ಇಂಡಿಯಾ ಪಡೆದಿದೆ, ಹಾಗೂ ಈ ಪ್ರಶಸ್ತಿಯನ್ನು ಒಕೊ ಗ್ಲೋಬಲ್ ನೀಡಿದೆ. * ಇನ್ವೆಸ್ಟ್ ಇಂಡಿಯಾ ಎಂಬುವದು ಭಾರತದ ರಾಷ್ಟ್ರೀಯ ಹೂಡಿಕೆ ಉತ್ತೇಜನ ಹಾಗೂ ಸೌಲಭ್ಯದ ಸಂಸ್ಥೆಯಾಗಿದೆ. * 2009 ರಲ್ಲಿ ಕೈಗಾರಿಕೆ ಮತ್ತು ಆಂತರಿಕ ಪ್ರಚಾರಕ್ಕಾಗಿ ಇಲಾಖೆಯ ಲಾಭರಹಿತ ಉದ್ಯಮವಾಗಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಇದನ್ನು ಸ್ಥಾಪನೆ ಮಾಡಲಾಗಿದೆ, ಹಾಗೂ ಇದು ಭಾರತದಾದ್ಯಂತ ಸುಸ್ಥಿರ ಹೂಡಿಕೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲಿದೆ ಎಂದು ತಿಳಿಸಲಾಗಿದೆ. * ಪ್ರಸ್ತುತ ಇನ್ವೆಸ್ಟ್ ಇಂಡಿಯಾ ಎಂಬುವದು ಹೂಡಿಕೆ ಪ್ರಚಾರ ಏಜೆನ್ಸಿಗಳು ಹಾಗೂ ಬಹುಪಕ್ಷೀಯ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ, ಹಾಗೂ ವಲಯ-ನಿರ್ದಿಷ್ಟ ಹೂಡಿಕೆದಾರರ ಗುರಿ ಮತ್ತು ಸುಸ್ಥಿರ ಹೂಡಿಕೆಗಾಗಿ ಅಭಿವೃದ್ಧಿಗಳ ಮೇಲೆ ಹೆಚ್ಚು ಕೇಂದ್ರೀಕರಿಸಲಿದೆ ಎಂದು ತಿಳಿದು ಬಂದಿದೆ.