Job Description: * ಬೆಂಗಳೂರು ನಗರದ(ಮೆಜಿಸ್ಟಿಕ್) ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅಮೆಜಾನ್ ನದಿ ಕಲ್ಪನೆಯಡಿ 12 ಅಡಿ ಉದ್ದದ ಸುರಂಗವನ್ನು ನಿರ್ಮಿಸಲಾಗಿದೆ. * ಈ ಅಮೆಜಾನ್ ನದಿ ಕಲ್ಪನೆಯಿಂದಾಗಿ ರೈಲು ನಿಲ್ದಾಣದಲ್ಲಿ ರೈಲುಗಳಿಗಾಗಿ ಕಾಯುತ್ತಿರು ಪ್ರಯಾಣಿಕರನ್ನು ಸೆಳೆಯುವ ಉದ್ದೇಶದಿಂದ ನಿಲ್ದಾಣದಲ್ಲಿ ಸುರಂಗವನ್ನು ನಿರ್ಮಿಸಿದ್ದಾರೆ. * ಈ ಸುರಂಗದಲ್ಲಿ ಅಕ್ವೇರಿಯಂ'ನ್ನು ಪ್ರಾರಂಭಿಸಿದ್ದಾರೆ, ಈ ಸುರಂಗ ಪ್ರವೇಶಕ್ಕೆ 25 ರೂ. ಶುಲ್ಕ ನಿಗದಿ ಪಡಿಸಿದ್ದಾರೆ, ಈ ಸುರಂಗದಲ್ಲಿ ಅಮೆಜಾನ್ ನದಿಗಳ ಮೀನುಗಳು ಮತ್ತು ಸಾಗರದಲ್ಲಿ ಕಂಡುಬರುವ ಮತ್ಸ್ಯಪ್ರಭೇದಗಳು, ಸಮುದ್ರಜೀವಿಗಳ ಮಾದರಿಯಲ್ಲಿ ಇರಲಿವೆ ಎಂದು ತಿಳಿಸಿದ್ದಾರೆ. * 1.2 ಕೋಟಿ ರೂ. ವೆಚ್ಚದಲ್ಲಿ ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರವು ಈ ಸುರಂಗವನ್ನು ನಿರ್ಮಿಸಿದೆ.