Job Description: * ಪ್ರಸ್ತುತ ಈ ಬಾರಿಯ ಟೋಕಿಯೊ ಒಲಿಂಪಿಕ್ಸ್ನ ಅಥ್ಲೆಟಿಕ್ಸ್ ವಿಭಾಗದ ವೈಯಕ್ತಿಕ ಸ್ಪರ್ಧೆಗಳಲ್ಲಿ ಭಾರತದ ಅಥ್ಲೀಟ್ಗಳು ಸ್ಪರ್ಧಿಸಲಿದ್ದಾರೆ, ಹಾಗೂ ಪುರುಷರ ಮತ್ತು ಮಿಶ್ರ ವಿಭಾಗಗಳ ರಿಲೆ ತಂಡಗಳು ಕೂಡ ಪಾಲ್ಗೊಳ್ಳಲಿವೆ ಎಂದು ವಿಶ್ವ ಅಥ್ಲೆಟಿಕ್ಸ್ ಸಂಸ್ಥೆಯು ಮಾಹಿತಿ ನೀಡಿದೆ. * ಅಥ್ಲೀಟ್ಗಳ ಮಾಹಿತಿ : ನೀರಜ್ ಚೋಪ್ರಾ, ಶಿವಪಾಲ್ ಸಿಂಗ್ ಅವರು ಪುರುಷರ ಜಾವೆಲಿನ್ ಥ್ರೋ ಭಾಗಿ, ಅವಿನಾಶ್ ಸಬ್ಳೆ ಅವರು ಪುರುಷರ 3000 ಮೀ ಸ್ಟೀಪಲ್ಚೇಸ್'ನಲ್ಲಿ ಭಾಗಿ, ಕೆ.ಟಿ. ಇರ್ಫಾನ್, ಸಂದೀಪ್ ಕುಮಾರ್, ರಾಹುಲ್ ರೋಹಿಲಾ ಅವರು 20 ಕಿ.ಮೀ ನಡಿಗೆಯಲ್ಲಿ ಸ್ಪರ್ಧಿಸಲಿದ್ದಾರೆ, ಭಾವಾ ಜಾಟ್, ಪ್ರಿಯಾಂಕಾ ಗೋಸ್ವಾಮಿ ಯವರು ಮಹಿಳೆಯರ 20 ಕಿ.ಮೀ ನಡಿಗೆಯಲ್ಲಿ ಭಾಗಿ, ಎಂ. ಶ್ರೀಶಂಕರ್ ಅವರು ಪುರುಷರ ಲಾಂಗ್ ಜಂಪ್'ನಲ್ಲಿ ಭಾಗವಹಿಸಲಿದ್ದಾರೆ, ತಜಿಂದರ್ ಪಾಲ್ ಸಿಂಗ್ ತೂರ್ ಅವರು ಪುರುಷರ ಶಾಟ್ಪಟ್ ವಿಭಾಗದಲ್ಲಿ ಭಾಗಿ, ಕಮಲ್ಪ್ರೀತ್ ಕೌರ್, ಸೀಮಾ ಪೂನಿಯಾ ರವರು ಮಹಿಳೆಯರ ವಿಭಾಗದ ಡಿಸ್ಕಸ್ಥ್ರೋ'ನಲ್ಲಿ ಭಾಗಿ, ದ್ಯುತಿ ಚಾಂದ್ ರವರು ಮಹಿಳೆಯರ 100 ಮೀ, 200 ಮೀ ಓಟದ ವಿಭಾಗದಲ್ಲಿ ಭಾಗಿ, ಎಂ.ಪಿ. ಜಬೀರ್ ರವರು ಪುರುಷರ 400 ಮೀ ಹರ್ಡಲ್ಸ್'ನಲ್ಲಿ ಭಾಗಿ, ಅನು ರಾಣಿಯವರು ಮಹಿಳಾ ವುಬಾಗದ ಜಾವೆಲಿನ್ ಥ್ರೋ'ನಲ್ಲಿ ಸ್ಪರ್ಧೆ, ಹಾಗೂ ಎಂ.ಪಿ. ಜಬೀರ್ ಅವರು 4X400 ಮೀ. ಪುರುಷರ ರಿಲೆ ಮತ್ತು ರಿಲೆ ಮಿಶ್ರ ತಂಡದಲ್ಲಿ ಸ್ಪರ್ದಿಸಲಿದ್ದಾರೆ.