Job Description: * ರಾಜ್ಯಗಳು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಉದ್ದೇಶದಿಂದ ಸಮುದಾಯಗಳನ್ನು ಇತರ ಹಿಂದುಳಿದ ವರ್ಗಗಳು OBC ಎಂದು ಘೋಷಣೆ ಮಾಡುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ಮರು ಪರಿಶೀಲಿಸಲು ನಿರಾಕರಿಸಿದೆ, ಹಾಗೂ ಕೇಂದ್ರ ಸರ್ಕಾರವು ಸಲ್ಲಿಸಿರುವ ಮೆಲ್ಮನವಿ ಅರ್ಜಿಯನ್ನು ನ್ಯಾಯಾಲಯ ಸದ್ಯ ವಜಾಗೊಳಿಸಿದೆ. * ಪ್ರಸ್ತುತ ಸಮುದಾಯಗಳನ್ನು ಹಿಂದುಳಿದವು ಎಂದು ಗುರುತಿಸುವ ಏಕೈಕ ಅಧಿಕಾರ ರಾಷ್ಟ್ರಪತಿಗೆ ಮಾತ್ರ ಇದೆ ಎಂದು ನ್ಯಾಯಾಲಯ ತಿಳಿಸಿದೆ, ಹಾಗೂ ಯಾವುದೇ ರಾಜ್ಯಗಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಗಳನ್ನು ಸಿದ್ಧಪಡಿಸುವ ಅಧಿಕಾರ ಇರುವದಿಲ್ಲ ಎಂದು ನ್ಯಾಯಾಲಯ ಘೋಷಣೆ ಮಾಡಿದೆ.