Job Description: * ಮಹಾರಾಷ್ಟ್ರದ ಭೌಗೋಳಿಕ ವಿಸ್ತೀರ್ಣದ ವ್ಯಾಪ್ತಿಯ ದೃಷ್ಟಿಯಿಂದ ಪುಣೆ ನಗರವು ಮಹಾರಾಷ್ಟ್ರದ ಅತಿದೊಡ್ಡ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ, ಇದೀಗ ಈ ಪುಣೆ ನಗರವು ಮುಂಬೈ ನಗರಕ್ಕಿಂತಲೂ ದೊಡ್ಡದಾಗಿದೆ. * ಪ್ರಸ್ತುತ ಪುಣೆ ಮಹಾನಗರಪಾಲಿಕೆಯ ವ್ಯಾಪ್ತಿಯು ಇದೀಗ 518 ಚದರ ಕಿ.ಮೀ ಆಗಿದೆ, ಹಾಗೂ ಮುಂಬೈ ಮಹಾನಗರಪಾಲಿಕೆಯ ವ್ಯಾಪ್ತಿಯು 434 ಚದರ ಕಿ.ಮೀ ಇದೇ ಎಂದು ತಿಳಿಸಿದ್ದಾರೆ. * ಮಹಾರಾಷ್ಟ್ರದ ಪುಣೆ ಮಹಾನಗರಪಾಲಿಕೆಯ ಈ ಮೊದಲು 331 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿತ್ತು, ಇದೀಗ ಮಹಾರಾಷ್ಟ್ರದ ನಗರಾಭಿವೃದ್ಧಿ ಇಲಾಖೆಯು ಪುಣೆ ನಗರದ ವ್ಯಾಪ್ತಿಗೆ ಸುತ್ತಮುತ್ತಲಿನ 23 ಗ್ರಾಮಗಳನ್ನು ಸೇರಿಸಿದೆ ಹಾಗೂ ಆದೇಶವನ್ನು ಹೊರಡಿಸಿದೆ, ಇದರಿಂದಾಗಿ ಪುಣೆಯ ನಗರಪಾಲಿಕೆಯ ಒಟ್ಟಾರೆ 518 ಚದರ ಕಿ.ಮೀ ವ್ಯಾಪ್ತಿಯು ಹೊಂದಿದಂತಾಗಿದೆ. * ಪ್ರಸ್ತುತ ಪುಣೆ ನಗರದ ಬಜೆಟ್ ಗಾತ್ರ ಮತ್ತು ಜನಸಂಖ್ಯೆಯನ್ನು ಗಮನಿಸಿದರೆ, ಸದ್ಯ ಮುಂಬೈ ನಗರ ಹೆಚ್ಚಿದೆ, ಪ್ರಸಕ್ತ 2021-22 ನೇ ಸಾಲಿನ ಹಣಕಾಸು ವರ್ಷದಲ್ಲಿ ಮುಂಬೈ ಪಾಲಿಕೆಯ ಬಜೆಟ್ ಗಾತ್ರ 39,038 ಕೋಟಿ ರೂ. ಆಗಿತ್ತು, ಆದರೆ ಪುಣೆ ಪಾಲಿಕೆಯ ಬಜೆಟ್ ಗಾತ್ರ 8,370 ಕೋಟಿಯಾಗಿದೆ. * ಸದ್ಯ ಮುಂಬೈ ನಗರಪಾಲಿಕೆಯ ಜನಸಂಖ್ಯೆಯು 1.2 ಕೋಟಿ ಇದೇ, ಹಾಗೂ ಪುಣೆ ನಗರವು 34 ಲಕ್ಷ ಜನಸಂಖ್ಯೆಯನ್ನು ಹೊಂದಿದೆ.