Job Description: * ಉದ್ಯಮಿ ಜೆಫ್ ಬೆಜೋಸ್ ಅವರು ಬಾಹ್ಯಾಕಾಶಕ್ಕೆ ಪ್ರಯಾಣ ಬೆಳಸಲಿದ್ದಾರೆ ಇದೀಗ ಅವರ ಜೊತೆಯಲ್ಲಿ 82 ವರ್ಷ ವಯಸ್ಸಿನ ಮಹಿಳಾ ಪೈಲಟ್ ಕೂಡ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳಸಲಿದ್ದಾರೆ. * ಪ್ರಸ್ತುತ ಜುಲೈ. 20 ರಂದು ನ್ಯೂ ಶೆಫರ್ಡ್ ಬಾಹ್ಯಾಕಾಶ ನೌಕೆಯಲ್ಲಿ ಉದ್ಯಮಿ ಜೆಫ್ ಬೆಜೋಸ್ ಹಾಗೂ ವಾಲಿ ಫಂಕ್ ಪ್ರಯಾಣ ಬೆಳಸಲಿದ್ದಾರೆ, ಮತ್ತು ಇವರು ಈ ಪ್ರಯಾಣದ ಹಿರಿಯ ವ್ಯಕ್ತಿಯಾಗಿಲಿದ್ದಾರೆ. * ಗಗನಯಾತ್ರಿಗಳಿಗೆ ಅಮೆರಿಕದಲ್ಲಿ 1960 ರಿಂದ 1961 ರವರೆಗೂ ಬಾಹ್ಯಾಕಾಶ ಪ್ರಯಾಣಕ್ಕೆ ತೆರಳುವ ತರಬೇತಿಯನ್ನು"ಮರ್ಕ್ಯುರಿ 13" ಕಾರ್ಯಕ್ರಮದಡಿಯಲ್ಲಿ ಮಹಿಳಾ ಪೈಲಟ್ಗಳಿಗೆ ನೀಡಲಾಗುತಿತ್ತು, ತರಬೇತಿ ಪಡೆದವರಲ್ಲಿ ಫಂಕ್ ಕೂಡ ಒಬ್ಬರಾಗಿದ್ದಾರೆ. * ಜುಲೈ 20 ರಂದು ಅಪೊಲೊ 11 ನೌಕೆಯು ಚಂದ್ರನ ಮೇಲೆ ಇಳಿದ ದಿನದ ವಾರ್ಷಿಕೋತ್ಸವ, ಹಾಗೂ ಅದೇ ದಿನವೇ ಟೆಕ್ಸಾಸ್ನಿಂದ ಬಾಹ್ಯಾಕಾಶದ ಪ್ರಯಾಣ ಪ್ರಾರಂಭಿಸಲಿದೆ ಎಂದು ತಿಳಿಸಿದ್ದಾರೆ.