Job Description: * 2021 ರ ಜೂನ್. 30 ರಂದು ಆಂಧ್ರ ಪ್ರದೇಶ ರಾಜ್ಯ ಸರ್ಕಾರವು ಹೊಸ "ಎಪಿ ಮಾಹಿತಿ ತಂತ್ರಜ್ಞಾನ ನೀತಿ 2021-24" ನ್ನು ಆರಂಭಿಸಿದೆ. * ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ರಾಜ್ಯ ಕ್ಯಾಬಿನೆಟ್ ಈ ಹೊಸ ನೀತಿಯನ್ನು ಅನುಮೋದಿಸಿದೆ, ಈ ನೀತಿಯಿಂದಾಗಿ ಮುಂಬರುವ ಮೂರು ವರ್ಷಗಳಲ್ಲಿ 55,000 ಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಯಾಗುವ ಸಾಧ್ಯತೆ ಇದೇ ಎಂದು ತಿಳಿಸಿದ್ದಾರೆ. * ಐಟಿ, ಎಲೆಕ್ಟ್ರಾನಿಕ್ಸ್ ಹಾಗೂ ಸಂವಹನ ವಿಭಾಗವನ್ನು ಸಹ ಸ್ವಾವಲಂಬಿ ಸಾಧಿಸುವ ಉದ್ದೇಶದಿಂದ ಆದಾಯ ಕೇಂದ್ರವಾಗಿ ಪರಿವರ್ತಿಸಲಾಗುವುದು, ಹಾಗೂ 1.65 ಲಕ್ಷ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುವ ಸಾಧ್ಯತೆ ಇದೇ ಎಂದಿದ್ದಾರೆ, ಮತ್ತು ಈ ನೀತಿಯು 2024 ರ ಮಾರ್ಚ್ 24 ರವರೆಗೆ ಜಾರಿಯಲ್ಲಿರಲಿದೆ ಎಂದು ತಿಳಿದು ಬಂದಿದೆ. * ಈ ಐಟಿ ನೀತಿಯ ಅಡಿಯಲ್ಲಿ ಆಂಧ್ರ ಸರ್ಕಾರವು ಕಾವು ಕೇಂದ್ರಗಳನ್ನು ಸ್ಥಾಪನೆ ಮಾಡುತ್ತದೆ, ಹಾಗೂ ಸ್ಟಾರ್ಟ್ಅಪ್'ಗಳಿಗಾಗಿ ಕಾರ್ಯಾಗಾರಗಳನ್ನು ಆಯೋಜಿಸುತ್ತದೆ, ಇದರ ಜೊತೆಗೆ ಆಂಧ್ರ ರಾಜ್ಯ ಸರ್ಕಾರವು ವಿಶಾಖಪಟ್ಟಣಂ ನಲ್ಲಿ ಐಟಿ ಎಮರ್ಜಿಂಗ್ ಟೆಕ್ನಾಲಜೀಸ್ ರಿಸರ್ಚ್ ಯೂನಿವರ್ಸಿಟಿಯನ್ನು ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.