Job Description: * ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಂದ ಕಿಸಾನ್ ರೈಲಿಗೆ ಚಾಲನೆ ನೀಡಿದ್ದಾರೆ, ಈ ಕಿಸಾನ್ ರೈಲು ಕೋಲಾರ ಜಿಲ್ಲೆಯ ಚಿಂತಾಮಣಿಯಿಂದ ನವದೆಹಲಿಗೆ 250 ಟನ್ ಮಾವು ಸಾಗಿಸುವ ಕಿಸಾನ್ ರೈಲಿ ಇದಾಗಿದೆ. * ರಾಜ್ಯದ ರೈತರು ಬೆಳೆದಿರುವ ಬೆಳೆಗಳಿಗೆ ಉತ್ತಮ ಮೌಲ್ಯ ನೀಡುವಲ್ಲಿ ಈ ಕಿಸಾನ್ ರೈಲು ಮಹತ್ವದ ಹೆಜ್ಜೆಯನ್ನು ನಿರ್ವಹಿಸಲಿದೆ, ಈ ಕಿಸಾನ್ ರೈಲು ರೈತರು ಬೆಳೆದ ಹಣ್ಣು, ತರಕಾರಿ ಮತ್ತು ಡೇರಿ ಉತ್ಪನ್ನಗಳನ್ನು ಅತೀಬೇಗನೆ ಮಾರುಕಟ್ಟೆಗೆ ತಲುಪಿಸಲು ಸಹಾಯವಾಗಲಿದೆ. * ಈ ಕಿಸಾನ್ ರೈಲು ಯೋಜನೆ ಅಡಿಯಲ್ಲಿ ರೈತರು, ರೈತ ವರ್ತಕರು ರೈಲ್ವೆ ಸಾಗಣೆ ದರದಲ್ಲಿ ಶೇ 50 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ. * 2020 ರ ಆಗಸ್ಟ್'ನಲ್ಲಿ ಈ ಕಿಸಾನ್ ರೈಲು ಪ್ರಾರಂಭವಾಗಿದೆ.