Job Description: * ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಡಾಸರ್ ಗ್ರಾಮದ ರೈತರು ಬೆಳೆದಿರುವ ಡ್ರ್ಯಾಗನ್ ಹಣ್ಣು'ನ್ನು ದುಬೈಗೆ ರಫ್ತು ಮಾಡಲಾಗಿದೆ. * ಡ್ರ್ಯಾಗನ್ ಹಣ್ಣನ್ನು 'ಕಮಲಂ' ಎಂದು ಕರೆಯುತ್ತಾರೆ, ಒಡಿಶಾ, ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್, ಆಂಧ್ರಪ್ರದೇಶ, ರಾಜ್ಯಗಳು ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅತೀ ಹೆಚ್ಚಾಗಿ ಬೆಳೆಯುತ್ತಾರೆ. * ಡ್ರ್ಯಾಗನ್ ಹಣ್ಣಿನಲ್ಲಿ 3 ಪ್ರಮುಖ ಪ್ರಭೇದಗಳಿವೆ:- ಗುಲಾಬಿ ಚರ್ಮದೊಂದಿಗೆ ಬಿಳಿ ಮಾಂಸ, ಗುಲಾಬಿ ಚರ್ಮದೊಂದಿಗೆ ಕೆಂಪು ಮಾಂಸ, ಹಾಗೂ ಹಳದಿ ಚರ್ಮದೊಂದಿಗೆ ಬಿಳಿ ಮಾಂಸ. * ಈ ಡ್ರ್ಯಾಗನ್ ಹಣ್ಣಿನಲ್ಲಿ ಫೈಬರ್, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕ ಶಕ್ತಿಯನ್ನು ಹೊಂದಿದೆ, ಈ ಹಣ್ಣು'ನ್ನು ಭಾರತದಲ್ಲಿ ಅಂದರೆ 1990 ರ ದಶಕದ ಆರಂಭದಲ್ಲಿ ಬೆಳೆಯಲು ಆರಂಭಿಸಿದರು. * ಈ ಹಿಂದೆ 2020 ರ ಜುಲೈ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಗುಜರಾತ್ನ ಶುಷ್ಕ ಕಚ್ ಪ್ರದೇಶದಲ್ಲಿ ಡ್ರ್ಯಾಗನ್ ಹಣ್ಣು ಸಾಕಾಣಿಕೆ ಬಗ್ಗೆ ಮಾಹಿತಿಯನ್ನು ನೀಡಿದ್ದರು. * 2021 ರ ಜನವರಿ ತಿಂಗಳಿನಲ್ಲಿ ಗುಜರಾತ್ ಸರ್ಕಾರವು ಡ್ರ್ಯಾಗನ್ ಹಣ್ಣನ್ನು 'ಕಮಲಂ' ಎಂದು ನಾಮಕರಣ ಮಾಡಲಾಗಿದೆ.