Job Description: * ಇಂಡಿಯನ್ ಹೊಟೇಲ್ ಕಂಪನಿ ಪ್ರಕಾರ ದಕ್ಷಿಣ ಏಷ್ಯಾದ ಅತಿದೊಡ್ಡ ಆತಿಥ್ಯ ಕಂಪನಿ ಹಾಗೂ ಸಾಂಪ್ರದಾಯಿಕ ಬ್ರಾಂಡ್ ತಾಜ್'ನ್ನು ಬ್ರಾಂಡ್ ಫೈನಾನ್ಸ್ ವಿಶ್ವದಾದ್ಯಂತ ಪ್ರಬಲ ಹೋಟೆಲ್ ಬ್ರಾಂಡ್ ಎಂದು ರೇಟ್ ಮಾಡಿದೆ. * ಪ್ರಸ್ತುತ ವಿಶ್ವದ ಪ್ರಮುಖ ಬ್ರಾಂಡ್ ಮೌಲ್ಯಮಾಪನ ಸಲಹಾ ಸಂಸ್ಥೆಯಾಗಿರುವ ಬ್ರಾಂಡ್ ಫೈನಾನ್ಸ್ ತನ್ನ ವಾರ್ಷಿಕ "ಹೊಟೇಲ್ 50 2021" ವರದಿಯಲ್ಲಿ ಈ ಘೋಷಣೆಯನ್ನು ಪ್ರಕಟಿಸಿದೆ, ಪ್ರಸ್ತುತ ಈ ವರದಿಯು ವಿಶ್ವಾದ್ಯಂತ ಇರುವ ಅತ್ಯಂತ ಮೌಲ್ಯಯುತ ಹಾಗೂ ಪ್ರಬಲ ಹೋಟೆಲ್ ಬ್ರಾಂಡ್ಗಳನ್ನು ಗುರುತಿಸುತ್ತದೆ. * ವಿಶ್ವ ದರ್ಜೆಯ ಗ್ರಾಹಕ ಸೇವೆಗಾಗಿ ತಾಜ್ ಹೋಟೆಲ್ ಎಎಎ ರೇಟಿಂಗ್ ಪಡೆದುಕೊಂಡಿದೆ, ಅಂದರೆ 100 ರಲ್ಲಿ 89.3 ಬ್ರಾಂಡ್ ಸಾಮರ್ಥ್ಯದ ಸೂಚ್ಯಂಕ ಪಡೆದುಕೊಂಡಿದೆ. * ಪ್ರಸ್ತುತ ತಾಜ್ ಹೋಟೆಲ್'ನ್ನು 1903 ರಲ್ಲಿ ಟಾಟಾ ಗ್ರೂಪ್ನ ಸಂಸ್ಥಾಪಕರಾಗಿದ್ದ ಜಮ್ಸೆಟ್ಜಿ ಟಾಟಾ ಅವರು ಈ ಹೋಟೆಲ್'ನ್ನು ಆರಂಭಿಸಿದರು, ಇದು ಇಂಡಿಯನ್ ಹೊಟೇಲ್ ಕಂಪನಿ ಲಿಮಿಟೆಡ್ನ ಅಂಗಸಂಸ್ಥೆಯಾಗಿದೆ ಹಾಗೂ ಇದು ತನ್ನ ಪ್ರಧಾನ ಕಚೇರಿಯ ಮುಂಬೈನ ನಾರಿಮನ್ ಪಾಯಿಂಟ್ನ ಎಕ್ಸ್ಪ್ರೆಸ್ ಟವರ್ಸ್ ಹೊಂದಿದೆ. * ಪ್ರಸ್ತುತ ತಾಜ್ ಹೋಟೆಲ್ ಕಂಪನಿಯು 100 ಕ್ಕೂ ಹೆಚ್ಚು ಹೋಟೆಲ್ಗಳು ಮತ್ತು ರೆಸಾರ್ಟ್ಗಳ ಕಾರ್ಯವನ್ನು ನಿರ್ವಹಿಸುತ್ತಿದೆ, ಭಾರತದಲ್ಲಿ 84 ಹೋಟೆಲ್'ಗಳು ಮಲೇಷ್ಯಾ, ಮಾಲ್ಡೀವ್ಸ್, ಭೂತಾನ್, ನೇಪಾಳ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಯುಕೆ, ಯುಎಇ, ಯುಎಸ್ಎ ಮತ್ತು ಜಾಂಬಿಯಾದ ಹೀಗೆ ಹಲವು ದೇಶಗಳಲ್ಲಿ ಒಟ್ಟು 16 ಹೋಟೆಲ್'ಗಳ ಕಾರ್ಯ ನಿರ್ವಹಿಸುತ್ತಿದೆ.