Job Description: * ಪ್ರಸ್ತುತ ತಮಿಳುನಾಡಿನ ಕ್ರೀಡಾಪಟುಗಳು ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದರೆ ಆ ಕ್ರೀಡಾ ಪಟುಗಳಿಗೆ 3 ಕೋಟಿ ನೀಡಲಾಗುವುದು, ಬೆಳ್ಳಿ ಪದಕ ಗೆದ್ದವರಿಗೆ 2 ಕೋಟಿ ಹಾಗೂ ಕಂಚಿನ ಪದಕ ಜಯಿಸಿದವರಿಗೆ 1 ಕೋಟಿ ನೀಡಲಾಗುತ್ತದೆ ಎಂದು ತಮಿಳನಾಡು ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಅವರು ತಿಳಿಸಿದ್ದಾರೆ. * ಕ್ರೀಡಾಪಟುಗಳಿಗೆ ಕ್ರೀಡೆಗೆ ಉತ್ತೇಜನ ನೀಡಲು ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಸಾಧನೆ ಮಾಡುವವರನ್ನು ಗೌರವ ನೀಡಲಾಗುತ್ತದೆ, ಪ್ರಸ್ತುತ ಈ ಟೋಕಿಯೋ ಒಲಿಂಪಿಕ್ಸ್'ನಲ್ಲಿ ಪದಕ ಗೆದ್ದವರಿಗೆ ಸರ್ಕಾರದಿಂದಲೇ ಘೋಷಣೆ ಮಾಡಿರುವ ಹಣವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. * ತಮಿಳುನಾಡು ರಾಜ್ಯದಿಂದ ಒಲಿಂಪಿಕ್ಸ್'ಗೆ ಆಯ್ಕೆಯಾಗಿರುವ ಕ್ರೀಡಾ ಪಟುಗಳಿಗೆ ತಲಾ 5 ಲಕ್ಷ ರೂ. ನೀಡಲಾಗಿದೆ, ಹಾಗೂ ಭಾರತದ ಮೊದಲ ಮಹಿಳಾ ಕ್ರೀಡಾಪಟು ಸಿ.ಎ.ಭವಾನಿ ಅವರು ಫೆನ್ಸಿಂಗ್ನಲ್ಲಿ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿರುವದರಿಂದ ಇವರಿಗೆ ತಮಿಳುನಾಡು ಸರ್ಕಾರವು 5 ಲಕ್ಷ ರೂ. ನೀಡಿದೆ ಎಂದು ತಿಳಿಸಿದ್ದಾರೆ.