Job Description: * ಪ್ರಸ್ತುತ ದೆಹಲಿ ಮೆಟ್ರೋ ಉತ್ತಮ ಗುಣಮಟ್ಟದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನೂ ಹೊಂದಿರುವ ಕಾರಣದಿಂದಾಗಿ ಜಪಾನ್ ಸೊಸೈಟಿ ಆಫ್ ಸಿವಿಲ್ ಎಂಜಿನಿಯರ್ಗಳಿಂದ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. * 2020 ರ ಅತ್ಯುತ್ತಮ ಸಿವಿಲ್ ಎಂಜಿನಿಯರಿಂಗ್ ಸಾಧನೆಯ ಪ್ರಶಸ್ತಿಯನ್ನು ದೆಹಲಿ ಮೆಟ್ರೋ ಗಿಟ್ಟಿಸಿಕೊಂಡಿದೆ, ಇಡೀ ವಿಶ್ವದಾದ್ಯಂತ ಸಿವಿಲ್ ಎಂಜಿನಿಯರಿಂಗ್ ತಂತ್ರಜ್ಞಾನದ ಅಭಿವೃದ್ಧಿ ಪ್ರದರ್ಶನ ಯೋಜನೆಗಳಲ್ಲಿ ದೆಹಲಿ ಮೆಟ್ರೋ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ. * ಪ್ರಸ್ತುತ ದೆಹಲಿ ಮೆಟ್ರೋ ಯೋಜನೆಯ ನಿರ್ಮಾಣ ಸ್ಥಳಗಳಲ್ಲಿ ಸುರಕ್ಷತೆ ಮತ್ತು ದಕ್ಷತೆಯ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಿದರಿಂದ ಹಾಗೂ ನಿವಾಸಿಗಳಿಗೆ ಸುರಕ್ಷಿತ ಮತ್ತು ಆರಾಮದಾಯಕ ಸಾರಿಗೆಯನ್ನು ನೀಡಿವೆ ಎಂದು ಉಲ್ಲೇಖಿಸಲಾಗಿದೆ.