Job Description: * ಪ್ರಸ್ತುತ ಸಾಜಿದ್ ಜಾವಿದ್ ಅವರು ಬ್ರಿಟನ್'ನ ನೂತನ ಆರೋಗ್ಯ ಸಚಿವರಾಗಿ ನೇಮಕಗೊಂಡಿದ್ದಾರೆ, ಇತ್ತೀಚಿಗೆ ರಾಜೀನಾಮೆ ನೀಡಿರುವ ಮ್ಯಾಟ್ಹ್ಯಾನ್ ಕಾಕ್ ಅವರ ಸ್ಥಾನವನ್ನು ಸಾಜಿದ್ ಅವರು ವಹಿಸಿಕೊಳ್ಳಲಿದ್ದಾರೆ ಎಂಬ ಈ ಮಾಹಿತಿಯನ್ನು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಸಚಿವಾಲಯದಲ್ಲಿ ಹೇಳಿದ್ದಾರೆ. * ಇತ್ತೀಚಿಗೆ ಆರೋಗ್ಯ ಸಚಿವರಾಗಿರುವ ಮ್ಯಾಟ್ಹ್ಯಾನ್ಕಾಕ್ ಅವರು ಕೋವಿಡ್-19 ನೀತಿ ನಿಯಮಗಳನ್ನು ಉಲ್ಲಂಘಿಸಿ ತನ್ನ ಕಚೇರಿಯಲ್ಲಿರುವ ಸಹಾಯಕಿಯನ್ನು ಚುಂಬಿಸಿದ(ಕಿಸ್)ರು ಈ ಘಟನೆಯು ವಿವಾದಕ್ಕೆ ಕಾರಣವಾಗಿದ್ದರಿಂದ, ಇವರು ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ ಎಂದು ತಿಳಿಸಲಾಗಿದೆ.