Job Description: *ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಭಾರತ 32,36,63,297 ಡೋಸ್ಗಳನ್ನು ನೀಡಿದ್ದರೆ, ಅಮೆರಿಕ 32,33,27,328 ಡೋಸ್ ಲಸಿಕೆಗಳನ್ನು ನೀಡಿದೆ. ಈ ಮಾಹಿತಿಯನ್ನು ವೀಕ್ಷಿಸಿದಾಗ ಭಾರತವು ಹೆಚ್ಚಿನ ಪ್ರಮಾಣದ ಲಸಿಕೆ ವಿತರಣೆ ಮಾಡಿದ್ದು, ಆ ಮೂಲಕ ಅಮೆರಿಕದ ಸಾಧನೆಯನ್ನು ಹಿಂದಿಕ್ಕಿದೆ. *ಜನವರಿ 16 , 2021 ರಿಂದ ಭಾರತದಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆ ಪ್ರಾರಂಭವಾಗಿದ್ದರೆ, ಅಮೆರಿಕವು 2020 ಡಿಸೆಂಬರ್ 14 ರಿಂದಲೇ ಲಸಿಕೆ ನೀಡಿಕೆ ಶುರುವಾಗಿತ್ತು. * ವ್ಯಾಕ್ಸಿನೇಷನ್ ಕಾರ್ಯಕ್ರಮದ 163 ನೇ ದಿನದಂದು ಅಂದರೆ ಜೂನ್ 27 ರಂದು 13.9 ಲಕ್ಷ ಫಲಾನುಭವಿಗಳು ತಮ್ಮ ಮೊದಲ ಡೋಸ್ ಮತ್ತು 3.3 ಲಕ್ಷ ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿತ್ತು ಎಂದು ವರದಿ ಹೇಳಲಾಗಿದೆ.