Job Description: * ಅಮೇರಿಕದ ವಾಯುಪಡೆಯು ಇರಾಕ್ ಮತ್ತು ಸಿರಿಯಾದಲ್ಲಿನ ಇರಾನ್ ಬೆಂಬಲಿತ ಉಗ್ರರ ಶಸ್ತ್ರಾಸ್ತ್ರ ಸಂಗ್ರಹ ವ್ಯವಸ್ಥೆಯ ಮೇಲೆ ವಾಯುದಾಳಿಯನ್ನು ಮಾಡಿದೆ. * ಅಮೇರಿಕದ ಅಧ್ಯಕ್ಷ ಜೋ ಬೈಡೆನ್ ರವರ ನಿರ್ದೇಶನದ ಮೇರೆಗೆ ಅಮೆರಿಕ ಮಿಲಿಟರಿ ವಾಯು ಪಡೆಗಳು ಇರಾಕ್- ಸಿರಿಯಾ ಗಡಿ ಪ್ರದೇಶದಲ್ಲಿ ಇಯುವಂತಹ ಇರಾನ್ ಬೆಂಬಲಿತ ಉಗ್ರ ಗುಂಪು ಹೊಂದಿರುವ ಸೌಲಭ್ಯಗಳ ಮೇಲೆ ವಾಯುದಾಳಿ ನಡೆಸಲಾಗಿದೆ ಎಂದು ಪೆಂಟಗಾನ್ ವಕ್ತಾರು ಆಗಿರುವ ಜಾನ್ ಎಫ್.ಕಿರ್ಬಿ ಅವರು ತಿಳಿಸಿದ್ದಾರೆ. * ಇರಾನ್ ಬೆಂಬಲಿತ ಉಗ್ರಗಾಮಿ ಗುಂಪುಗಳಾಗಿರುವ ಕತೈಬ್ ಹಿಝ್ಬುಲ್ಲಾ ಮತ್ತು ಕತೈಬ್ ಸೈಯಿದ್ ಅಲ್ ಶುಹದಾಗಳು ಅಮೇರಿಕ ಪ್ರಜೆಗಳು ವಾಸವಿರುವ ಪ್ರದೇಶದ ಮೇಲೆ ಡ್ರೋನ್ ದಾಳಿ ನಡೆಸಲು ಬಳಸುವ ಸೌಲಭ್ಯಗಳ ಮೇಲೆ ಅಮೇರಿಕ ವಾಯುದಾಳಿ ನಡೆಸಿದೆ ಎಂದು ಕಿರ್ಬಿ ಅವರು ತಿಳಿಸಿದ್ದಾರೆ. * ಈ ಹಿಂದೆ ಅಮೆರಿಕ ರಾಷ್ಟ್ರವು ಫೆಬ್ರವರಿ ತಿಂಗಳಿನಲ್ಲಿ ಪೂರ್ವ ಸಿರಿಯಾದ ಮೇಲೆ ವಾಯುದಾಳಿ ನಡೆಸಿತ್ತು.