Job Description: * ಭಾರತೀಯ DRDO ಸಂಸ್ಥೆಯು ಸ್ವದೇಶಿಯವಾಗಿ ಅಭಿವೃದ್ಧಿಪಡಿಸಿರುವ "ಪಿನಾಕಾ" ರಾಕೆಟ್'ನ ಪರೀಕ್ಷಾರ್ಥ ಪ್ರಯೋಗವನ್ನು ಒಡಿಶಾ ರಾಜ್ಯದ ಕರಾವಳಿ ತೀರದ ಚಾಂದಿಪುರ್ ಪ್ರದೇಶದಲ್ಲಿ ಯಶಸ್ವಿಯಾಗಿ ನಡೆಸಿದೆ. * DRDO ಸಂಸ್ಥೆಯು ಒಟ್ಟಾರೆ 25 ಪಿನಾಕಾ ರಾಕೆಟ್'ಗಳ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ. * ಬಹುಹಂತದ ರಾಕೆಟ್ ಉಡಾವಣಾ ವಾಹಕದಿಂದ 122 MM ಕ್ಯಾಲಿಬರ್ ರಾಕೆಟ್ಗಳನ್ನು ಪ್ರಯೋಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. * DRDO ಸಂಸ್ಥೆಯು ನಿರ್ಮಾಣಮಾಡಿರುವ ಈ "ಪಿನಾಕಾ" ರಾಕೆಟ್ಗಳು 45 ಕಿ.ಮೀ ದೂರದ ನಿಗದಿತ ಗುರಿಯನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿಸಿದ್ದಾರೆ.