Job Description: * ಪ್ರಸ್ತುತ ಕೋವಿಡ್-19'ನ 3 ನೇ ಅಲೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಿದ್ಧತೆಗಳನ್ನು ನಡೆಸಿದೆ, ಇದೆ ಸಂಧರ್ಭದಲ್ಲಿ ಕೇಂದ್ರ ಸರ್ಕಾರವು ಪಿಎಂ ಕೇರ್'ನ ಅಡಿಯಲ್ಲಿ ಕರ್ನಾಟಕ ರಾಜ್ಯಕ್ಕೆ 50 ಆಮ್ಲಜನಕ ಉತ್ಪಾದನ ಘಟಕಗಳನ್ನು ನೀಡಿದೆ. * ಈ ಹಿಂದೆ ಕೋವಿಡ್-19'ನ 2 ನೇ ಅಲೆಯ ಸಂಧರ್ಭದಲ್ಲಿ ಎಲ್ಲ ರಾಜ್ಯಗಳಲ್ಲಿ ಆಮ್ಲಜನಕದ ಕೊರತೆ ಉಂಟಾಗಿತ್ತು ಇದನ್ನು ಗಮನಿಸಿದ ಕೇಂದ್ರ ಸರ್ಕಾರವು ಇದೀಗ ಎಲ್ಲ ರಾಜ್ಯಗಳಿಗೆ ಆಮ್ಲಜನಕದ ಘಟಕಗಳನ್ನು ಮಂಜೂರು ಮಾಡಲು ಆರಂಭಿಸಿದೆ. * ಪಿಎಂ ಕೇರ್'ನಿಂದ ಮಂಜೂರು ಆದ ಆಮ್ಲಜನಕದ ಘಟಕಗಳ ವಿವರ: ಬೆಂಗಳೂರು ನಗರ ಹಾಗೂ ಗ್ರಾಮೀಣ ಸೇರಿ 6 ಘಟಕ, ಮೈಸೂರು ಮತ್ತು ಕಲಬುರಗಿ ಜಿಲ್ಲೆಗಳಿಗೆ ತಲಾ 3 ಘಟಕ, ಬೀದರ್, ಗದಗ, ದಾವಣಗೆರೆ, ಕೊಡಗು, ಕೊಪ್ಪಳ, ಮಂಡ್ಯ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಉತ್ತರ ಕನ್ನಡ ಈ ಎಲ್ಲ ಜಿಲ್ಲೆಗಳಲ್ಲಿ ತಲಾ 2 ರಂತೆ ಆಮ್ಲಜನಕ ಘಟಕ, ಮತ್ತೇ ಇನ್ನಉಳಿದ ಎಲ್ಲ ಜಿಲ್ಲೆಗಳಲ್ಲಿ ತಲಾ ಒಂದು ಆಮ್ಲಜನಕ ಘಟಕ ಮಂಜೂರು ಮಾಡಿದ್ದಾರೆ. * ಈ ರಾಜ್ಯಕ್ಕೆ ಮಂಜೂರು ಆಗಿರುವ ಈ ಘಟಕಗಳ ನಿರ್ಮಾಣಕ್ಕೆ DRDO, ಸೆಂಟ್ರಲ್ ಮೆಡಿಕಲ್ ಸರ್ವೀಸ್ ಸೊಸೈಟಿ, ಮತ್ತು ಎಚ್ಎಲ್ಎಲ್ ಇನ್ಫ್ರಾಟೆಕ್ ಸರ್ವಿಸ್ ಲಿ. ಸಂಸ್ಥೆಗಳಿಗೆ ನಿರ್ವಹಣದ ಹೊಣೆಯನ್ನು ಹೊರಿಸಲಾಗಿದೆ.