Job Description: * ಒಲಿಂಪಿಕ್ಸ್ ಪದಕ ವಿಜೇತೆ ಮಹಿಳಾ ವೇಟ್ ಲಿಫ್ಟರ್ ಕರ್ಣಂ ಮಲ್ಲೇಶ್ವರಿ ಅವರು ದೆಹಲಿ ಕ್ರೀಡಾ ವಿಶ್ವವಿದ್ಯಾಲಯ ಉಪಕುಲಪತಿಯಾಗಿ ಆಯ್ಕೆಯಾಗಿದ್ದಾರೆ, ಆಂಧ್ರಪ್ರದೇಶ ರಾಜ್ಯಪಾಲರಾಗಿರುವ ಬಿಸ್ವ ಭೂಷಣ್ ಹರಿಚಂದನ್ ಅವರು ಕರ್ಣಂ ಮಲ್ಲೇಶ್ವರಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. * ಭಾರತದ ಮೊದಲ ಮಹಿಳಾ ಒಲಿಂಪಿಕ್ ಪದಕ ವಿಜೇತೆಯಾದ ಮಲ್ಲೇಶ್ವರಿ ಅವರು12 ವರ್ಷ ವಯಸ್ಸಿನಲ್ಲಿ ಎಸ್ಎಎಪಿ ತರಬೇತುದಾರ ನೀಲಾಮ್ಸೆಟ್ಟಿ ಅಪ್ಪಣ್ಣ ಅವರ ಮಾರ್ಗದರ್ಶನದಲ್ಲಿ ವೇಟ್ಲಿಫ್ಟಿಂಗ್'ನಲ್ಲಿ ತರಬೇತಿ ಪಡೆಯುತ್ತಿದ್ದರು. * ಕರ್ಣಂ ಮಲ್ಲೇಶ್ವರಿ ಅವರು 1993, 1994, 1995 ಹಾಗೂ 1996 ರಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್'ನಲ್ಲಿ 2 ಚಿನ್ನ ಹಾಗೂ 2 ಬೆಳ್ಳಿ ಹೀಗೆ ಹಲವು ಅಂತರರಾಷ್ಟ್ರೀಯ ಪದಕಗಳನ್ನು ಪಡೆದುಕೊಂಡಿದ್ದರು. * ಕರ್ಣಂ ಮಲ್ಲೇಶ್ವರಿ ಅವರು ವೇಟ್ಲಿಫ್ಟರ್ ರಾಜೇಶ್ ತ್ಯಾಗಿ ಅವರು 1997ರಲ್ಲಿ ಮದುವೆಯಾಗಿದ್ದರು, ನಂತರ 2004ರ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವಲ್ಲಿ ವಿಫಲವಾದರು ನಂತರ ನಿವೃತ್ತಿಯನ್ನು ಘೋಷಣೆ ಮಾಡಿದರು. * ಕರ್ಣಂ ಮಲ್ಲೇಶ್ವರಿ ಅವರು ಒಟ್ಟಾರೆ ಏಷ್ಯಾ ವೇಟ್ ಲಿಫ್ಟಿಂಗ್ ಚಾಂಪಿಯನ್'ನಲ್ಲಿ 11 ಪದಕ ಹಾಗೂ 29 ಅಂತಾರಾಷ್ಟ್ರೀಯ ಪದಕಗಳನ್ನು ಜಯಿಸಿದ್ದಾರೆ, ಇದರ ಜೊತೆ ಅರ್ಜುನ ಪ್ರಶಸ್ತಿ, ಪದ್ಮಶ್ರೀ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ.