Job Description: * ಕೇರಳದ ತಟ್ಟೆಕಾಡ್ ಪಕ್ಷಿಧಾಮದ ಸಮೀಪದಲ್ಲಿ ಹೊಸ ಜಾತಿಯ ಚಿಮ್ಮುವ ಕಪ್ಪೆಯನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. * ಈ ಚಿಮ್ಮುವ ಕಪ್ಪೆಯನ್ನು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ಮತ್ತು ಭುವನೇಶ್ವರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ರೀಸರ್ಚ್ ತಂಡಗಳು ಜೊತೆಯಾಗಿ ಈ ಕಪ್ಪೆಯನ್ನು ಪತ್ತೆ ಮಾಡಿದ್ದಾರೆ, ಈ ಕಪ್ಪೆಗೆ ಈಯುಫೆಲಿಕ್ಟೀಸ್ ಕೇರಳ ಎಂದು ನಾಮಕರಣ ಮಾಡಿದ್ದಾರೆ ಎಂದು ನ್ಯೂಜಿಲೆಂಡ್ನ ಅಂತರರಾಷ್ಟ್ರೀಯ ಜರ್ನಲ್ ಝೂಟಾಕ್ಸ್ ವರದಿ ಮಾಡಿದೆ. * ಒಟ್ಟಾರೆ ಭಾರತದಲ್ಲಿ ಕಳೆದ ಎರಡು ಶತಮಾನಗಳಿಂದ ಹಲವು ಬಗೆಯ ಚಿಮ್ಮುವ ಕಪ್ಪೆಗಳನ್ನು ಪತ್ತೆ ಹಚ್ಚಲಾಗಿದೆ. * ಕೇರಳ ರಾಜ್ಯದಲ್ಲಿ ಸರಿ ಸುಮಾರು 180 ಜಾತಿಯ ಕಪ್ಪೆಗಳಿವೆ ಎಂದು ತಿಳಿಸಲಾಗಿದೆ.