Job Description: * ಶತಮಾನದ ಎಡೆಲ್ಗೈವ್ ಹುರುನ್ ಲೋಕೋಪಕಾರಿಗಳ ಪಟ್ಟಿಯಲ್ಲಿ ಟಾಟಾ ಗ್ರೂಪ್ನ ಸಂಸ್ಥಾಪಕರಾಗಿದ್ದ ಜಮ್ಸೆಟ್ಜಿ ನುಸರ್ವಾಂಜಿ ಟಾಟಾ ಅಗ್ರಸ್ಥಾನದಲ್ಲಿದ್ದಾರೆ * ಟಾಟಾ ಗ್ರೂಪ್ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ 102.4 ಬಿಲಿಯನ್ ದೇಣಿಗೆ ನೀಡಲಾಗಿದೆ, ಟಾಟಾದ ಒಟ್ಟು ಲೋಕೋಪಕಾರಿ ಮೌಲ್ಯವು 100 ಬಿಲಿಯನ್ ಎಂದು ಅಂದಾಜಿಸಿದ್ದಾರೆ. * ಅಧ್ಯಕ್ಷ ರತನ್ ಟಾಟಾ ಅವರು ಟಾಟಾ ಗ್ರೂಪ್ ಹಾಗೂ ಅದರ ಲೋಕೋಪಕಾರಿ ಚಟುವಟಿಕೆಗಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. * ಜಮ್ಸೆಟ್ಜಿ ಟಾಟಾ ಅವರು ಜಮ್ಶೆಡ್ಪುರದಲ್ಲಿ ಟಾಟಾ ಐರನ್ ಮತ್ತು ಸ್ಟೀಲ್ ವರ್ಕ್ಸ್ ಕಂಪನಿಯ ಸ್ಥಾಪಕರಾಗಿದ್ದರು, ಇದೀಗ ಈ ಕಂಪನಿಯನ್ನು ಟಾಟಾ ಸ್ಟೀಲ್ ಎಂದು ಕರೆಯುತ್ತಾರೆ, ಜಮ್ಸೆಟ್ಜಿ ಟಾಟಾ ಅವರು 1904 ರಲ್ಲಿ ನಿಧನ ಹೊಂದಿದರು. * ಪ್ರಸ್ತುತ ಈ ಟಾಟಾ ಸ್ಟೀಲ್ ಕಂಪನಿಯು 26 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ, ಸರಿ ಸುಮಾರು 80,500 ಜನರಿಗೆ ಉದ್ಯೋಗ ನೀಡಿದೆ. * ಭಾರತೀಯ ಉದ್ಯಮದ ಪಿತಾಮಹ ಎಂದು ಜಮ್ಸೆಟ್ಜಿ ಟಾಟಾ ಅವರನ್ನು ಕರೆಯುತ್ತಾರೆ. * ಈ ಟಾಟಾ ಕಂಪನಿಯು ಭಾರತೀಯ ಸಾರ್ವಜನಿಕ ಬಹುರಾಷ್ಟ್ರೀಯ ಸಂಘಟನೆಯಾಗಿದೆ ಇದರಲ್ಲಿ ವಾಹನಗಳು, ವಿಮಾನಗಳು ಹಾಗೂ ಇನ್ನಿತರ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ, ಈ ಕಂಪನಿಯು 1868 ರಲ್ಲಿ ಸ್ಥಾಪನೆಯಾಗಿದೆ ಪ್ರಧಾನ ಕಚೇರಿ ಮುಂಬೈ ನಗರದಲ್ಲಿದೆ.