Job Description: * ಇದೀಗ ಭಾರತ ದೇಶದಲ್ಲಿ ಉತ್ಪಾದನೆಯಾಗುತ್ತಿರುವ 'ಕೋವ್ಯಾಕ್ಸಿನ್' ಲಸಿಕೆಯ ದಕ್ಷತೆ ಬಗ್ಗೆ ಭಾರತ್ ಬಯೋಟೆಕ್ ಸಂಸ್ಥೆಯ ವರದಿ ಮಾಡಿದೆ. * ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯು 'ಕೋವ್ಯಾಕ್ಸಿನ್' ಲಸಿಕೆಯ ರಫ್ತಿಗೆ ಅನುಮೋದನೆ ಅರ್ಜಿಯನ್ನು ತಿರಸ್ಕರಿಸಿತ್ತು ಮತ್ತು ಹೆಚ್ಚಿನ ದತ್ತಾಂಶಗಳನ್ನು ನೀಡಬೇಕು ಎಂದು ಕೇಳಿತ್ತು. * ಇದೀಗ ಭಾರತ್ ಬಯೋಟೆಕ್ ಸಂಸ್ಥೆಯು 'ಕೋವ್ಯಾಕ್ಸಿನ್' ಲಸಿಕೆಯ 3 ನೇ ಹಂತದ ಕ್ಲಿನಿಕಲ್ ಟ್ರಯಲ್'ನ ವರದಿಯನ್ನು ನೀಡಿದೆ, ಅದುವೇ ಈ ಲಸಿಕೆಯು ಕೋವಿಡ್-19 ಸಾಂಕ್ರಾಮಿಕ ಸೋಂಕಿನ ವಿರುದ್ಧ ಹೋರಾಡಲು ಕೋವ್ಯಾಕ್ಸಿನ್ ಲಸಿಕೆ 77.8% ರಷ್ಟು ಪರಿಣಾಮಕಾರಿ ಎಂದು ವರದಿಯನ್ನು ಸಲ್ಲಿಸಿದೆ, ಹಾಗೂ ಈ ಲಸಿಕೆಯ ಮಾಹಿತಿಯನ್ನು ಭಾರತೀಯ ಔಷಧ ನಿಯಂತ್ರಕ ಸಂಸ್ಥೆ ಡಿಸಿಜಿಐಗೆ ನೀಡಿದೆ. * ಇದೀಗ ಭಾರತದಲ್ಲಿ ಸೆರಂ ಇನ್ಸ್ಟಿಟ್ಯೂಟ್'ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆಗಳನ್ನು ಜನರಿಗೆ ನೀಡುತ್ತಿದ್ದಾರೆ, ಹಾಗೂ ರಷ್ಯಾ ದೇಶದ ಸ್ಫುಟ್ನಿಕ್- ವಿ ಲಸಿಕೆ ನೀಡಲು ತಯಾರಿ ನಡೆಸಲಾಗುತ್ತಿದೆ.