Job Description: * ಇರಾನ್ನ ಏಕೈಕ ಪರಮಾಣು ಸ್ಥಾವರವನ್ನು ತಾತ್ಕಾಲಿಕವಾಗಿ ತುರ್ತು ಸ್ಥಗಿತಗೊಳಿಸಲಾಗಿದೆ ಎಂದು ಸರಕಾರಿ ಸುದ್ದಿವಾಹಿನಿ ಮಾಹಿತಿಯನ್ನು ಪ್ರಕಟಿಸಿದೆ, ಪ್ರಸ್ತುತ ಬುಶೆಹರ್'ನಲ್ಲಿರುವ ಈ ಪರಮಾಣು ಸ್ಥಾವರವು ಮೂರು ರಿಂದ ನಾಲ್ಕು ದಿನವರೆಗೆ ಸ್ಥಗಿತವಾಗಲಿದೆ ಎಂದು ತಿಳಿಸಿದ್ದಾರೆ, ಇದರಿಂದಾಗಿ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ವಿದ್ಯುತ್ ಉತ್ಪಾದನಾ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ಈ ಪರಮಾಣು ಸ್ಥಾವರವು ರಷ್ಯಾ ಸಹಾಯದೊಂದಿಗೆ ನಿರ್ಮಾಣ ಗೊಂಡಿದೆ,ಪ್ರಸ್ತುತ ಈ ಸ್ಥಾವರದಲ್ಲಿ ಬಳಕೆ ಮಾಡಲಾಗಿರುವ ಕಬ್ಬಿಣದ ಸರಳುಗಳನ್ನು ಮರಳಿ ರಷ್ಯಾ ರಾಷ್ಟ್ರಕ್ಕೆ ಹಿಂತಿರುಗಿಸಬೇಕೆಂದು ಷರತ್ತು ನೀಡಿದೆ. * ಈ ಹಿಂದೆ ಅಮೆರಿಕ ಹೇರಿದ ನಿರ್ಬಂಧದಿಂದಾಗಿ ರಷ್ಯಾದಿಂದ ಪರಮಾಣು ಸಾಧನಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಸ್ಥಾವರದ ನಿರ್ಮಾಣದ ಕಾರ್ಯವು ಸ್ಥಗಿತಗೊಳ್ಳುವ ಎಲ್ಲ ಲಕ್ಷಣಗಳಿವೆ ಎಂದು 2018ರಲ್ಲಿ ಇರಾನ್ನ ಪರಮಾಣು ಇಲಾಖೆಯ ಅಧಿಕಾರಿ ಮುಹಮ್ಮದ್ ಜಫಾರಿ ತಿಳಿಸಿದ್ದರು. * ಇರಾನ್ ನ ಈ ಪರಮಾಣು ಸ್ಥಾವರವು ರಷ್ಯಾ ಉತ್ಪಾದಿಸಿದ ಯುರೇನಿಯಂನಿಂದ ಕಾರ್ಯಚರಿಸುತ್ತದೆ ಹಾಗೂ ಈ ಸ್ಥಾವರವು ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಪರಮಾಣು ದಳದ ನಿಗಾದ ಅಡಿಯಲ್ಲಿ ನಡೆಯುತ್ತದೆ. * ಈ ಪರಮಾಣು ಸ್ಥಾವರದ ನಿರ್ಮಾಣದ ಕಾರ್ಯಕ್ಕೆ 1970 ರಲ್ಲಿ ಚಾಲನೆ ಸಿಕ್ಕಿತ್ತು, ಆದರೆ ಇರಾನ್ -ಇರಾಕ್ ಯುದ್ಧದ ಸಂಧರ್ಭದಲ್ಲಿ ಈ ಸ್ಥಾವರವು ದಾಳಿಗೆ ಗುರಿಯಾಗಿತ್ತು, ನಂತರದ ದಿನಗಳಲ್ಲಿ ರಷ್ಯಾ ಈ ಸ್ಥಾವರ ನಿರ್ಮಾಣದ ಕಾರ್ಯವನ್ನು ಪೂರ್ಣಗೊಳಿಸಿದೆ ಎಂದು ತಿಳಿದು ಬಂದಿದೆ.